ಭಾನುವಾರ, ಆಗಸ್ಟ್ 1, 2021
26 °C
ಜಿಲ್ಲೆಯಲ್ಲಿ 8 ಸಕ್ರಿಯ ಪ್ರಕರಣ, 33 ಮಂದಿ ಗುಣಮುಖ

ಮುಂಬೈನಿಂದ ಬಂದ ಇಬ್ಬರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಮುಂಬೈನಿಂದ ರೈಲಿನಲ್ಲಿ ಜಿಲ್ಲೆಗೆ ಬಂದಿದ್ದ ಇಬ್ಬರಿಗೆ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದೆ. 59 ವರ್ಷದ ಪುರುಷ (ಪಿ-5383) ಹಾಗೂ 49 ವರ್ಷದ ಮಹಿಳೆಯಲ್ಲಿ (ಪಿ-5384) ಸೋಂಕು ಕಾಣಿಸಿಕೊಂಡಿದೆ.

ಮುಂಬೈನಿಂದ ಜಿಲ್ಲೆಗೆ ರೈಲಿನಲ್ಲಿ ಬರುತ್ತಿರುವ ಪ್ರಯಾಣಿಕರಲ್ಲಿ ಬೆಳಗಾವಿ, ಹಾವೇರಿ, ಧಾರವಾಡ, ಬಳ್ಳಾರಿ ಜಿಲ್ಲೆಯವರೂ ಸೇರಿದ್ದು, ಅವರನ್ನು ಸ್ವಂತ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಉಳಿದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಆದರೆ, ಇವರಲ್ಲಿ ಎಷ್ಟು ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂಬ ನಿಖರ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಇಲ್ಲ. ಮುಂಬೈನಿಂದ ಬಂದ ಬಹುತೇಕ ಪ್ರಯಾಣಿಕರಿಗೆ ಸೋಂಕು ಇದೆ ಎನ್ನುವ ಆತಂಕ ಜಿಲ್ಲೆಯ ಜನರದ್ದು. ಹೀಗಾಗಿ ಇವರ ವೈದ್ಯಕೀಯ ವರದಿಯ ಫಲಿತಾಂಶವನ್ನು ಜಿಲ್ಲೆಯ ಜನರು ಆತಂಕದಿಂದಲೇ ಎದುರು ನೋಡುತ್ತಿದ್ದಾರೆ.

ನಾಲ್ಕು ಕಂಟೈನ್ಮೆಂಟ್‌ ಪ್ರದೇಶ: ಗದಗ ನಗರದ ಪಂಚಾಕ್ಷರಿ ನಗರದ ವಾರ್ಡ್ 28ರ ಸುತ್ತಲಿನ ಪ್ರದೇಶ, ಸೇವಾಲಾಲ್ ನಗರ, ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮ ಪಂಚಾಯ್ತಿ ವಾರ್ಡ್ ನಂ.8ರ ಸುತ್ತಲಿನ 100 ಮೀಟರ್‌ ಪ್ರದೇಶ, ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ 11ರ ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶವಾಗಿ ಮತ್ತು ಇದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಬಫರ್‌ ಝೋನ್‌ನ ಮೊದಲ 1 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಲ್ಲೂ ಆರೋಗ್ಯ ತಪಾಸಣೆ ನಡೆಯಲಿದೆ.

ಸೋಮವಾರದಿಂದ ದರ್ಶನ ಭಾಗ್ಯ: ಲಾಕ್‌ಡೌನ್‌ ಬೆನ್ನಲ್ಲೇ ಬಾಗಿಲು ಮುಚ್ಚಿದ್ದ ನಗರದ ಐತಿಹಾಸಿಕ ದೇಗುಲ, ಚರ್ಚ್‌, ಮಸೀದಿ ಮತ್ತು ಮಠದ ದ್ವಾರಗಳು ಭಕ್ತರ ಪ್ರವೇಶಕ್ಕೆ ಸೋಮವಾರ ಬೆಳಿಗ್ಗೆ ತೆರೆಯಲಿವೆ. ಇದಕ್ಕೂ ಮುನ್ನ ಭಾನುವಾರ ಕೆಲವಡೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ದೃಶ್ಯಕಂಡುಬಂತು. ಅಂತರ ಕಾಪಾಡಿಕೊಳ್ಳಲು ದೇವಸ್ಥಾನಗಳಲ್ಲಿ ಮಾರ್ಕಿಂಗ್‌ ಮಾಡಲಾಗಿದೆ.

ನಗರದ ತೋಂಟದಾರ್ಯ ಮಠದ ಗದ್ದುಗೆಯ ದರ್ಶನಕ್ಕೆ ಸೋಮವಾರದಿಂದ ಭಕ್ತರಿಗೆ ಅವಕಾಶ ಸಿಗಲಿದೆ. ಆದರೆ, ಸದ್ಯಕ್ಕೆ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಐತಿಹಾಸಿಕ ವೀರನಾರಾಯಣ ದೇವಸ್ಥಾನದ ಮುಖ್ಯದ್ವಾರವೂ ತೆರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.