ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಬುಧವಾರ, ಏಪ್ರಿಲ್ 24, 2019
31 °C

ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Published:
Updated:

ಶಿರಹಟ್ಟಿ: ತಾಲ್ಲೂಕಿನ ಹೊಳೆ ಇಟಗಿ ಗ್ರಾಮದಲ್ಲಿ ಶುಕ್ರವಾರ ಇಬ್ಬರು ಬಾಲಕರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬಾರದೇ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪಟ್ಟಣದ ಮ್ಯಾಗೇರಿ ಓಣಿಯ ಕರಿಯಪ್ಪ ಮಂಜಪ್ಪ ಕುರಿ (12) ಹಾಗೂ ಕರಿಯಪ್ಪ ರಾಮಪ್ಪ ಕುರಿ (21) ಮೃತಪಟ್ಟ ಬಾಲಕರು. ಇಬ್ಬರೂ ಸಹೋದರರು.

ಶಿರಹಟ್ಟಿ ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಕರಿಸಿದ್ದೇಶ್ವರ ದೇವರನ್ನು ಯುಗಾದಿ ಹಿಂದಿನ ದಿನ ಹೊಳೆ ಇಟಗಿ ಗ್ರಾಮದ ಮೂಲಕ ಹರಿದಿರುವ ತುಂಗಭದ್ರಾ ನದಿಗೆ ಹೊಳೆ ಸ್ನಾನಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯ ಇದೆ. ಶುಕ್ರವಾರ ದೇವರನ್ನು ಹೊಳೆ ಸ್ನಾನಕ್ಕೆ ತೆಗೆದುಕೊಂಡು ಹೋಗುವಾಗ ಗ್ರಾಮಸ್ಥರೊಂದಿಗೆ ಈ ಬಾಲಕರೂ, ಬಂದಿದ್ದರು.

ದೇವರಿಗೆ ಹೊಳೆ ಸ್ನಾನ ಮಾಡಿಸುವ ಸ್ಥಳದಿಂದ ಸ್ವಲ್ಪ ದೂರದಲ್ಲಿ,ಈ ಬಾಲಕರಿಬ್ಬರು ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ. ಆದರೆ, ಈಜು ಬಾರದ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟರು’ ಎಂದು ಸ್ಥಳೀಯರು ತಿಳಿಸಿದರು.ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !