ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬುಲೆನ್ಸ್ ವಾಹನದಲ್ಲೇ ಹೆರಿಗೆ

Published : 30 ಜುಲೈ 2023, 15:17 IST
Last Updated : 30 ಜುಲೈ 2023, 15:17 IST
ಫಾಲೋ ಮಾಡಿ
Comments

ಮುಂಡರಗಿ: ಅಂಬುಲೆನ್ಸ್ ವಾಹನದಲ್ಲಿ ಹೆರಿಗೆ ನೋವಿನಿಂದ ತತ್ತರಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ತುರ್ತು ವೈದ್ಯಕೀಯ ತಂತ್ರಜ್ಞ ಶಿವಕುಮಾರ ಇಟಗಿ ಅವರು ಸುಸೂತ್ರವಾಗಿ ಮತ್ತು ಸಹಜ ಹೆರಿಗೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾನುವಾರ ಬೆಳಗಿನ ಜಾವ 3 ಗಂಟೆಗೆ ತಾಲ್ಲೂಕಿನ ಪೇಠಾಲೂರ ಗ್ರಾಮದ ಗೀತಾ ಭೀಮಪ್ಪ ಮುದೇನಗುಡಿ ಎಂಬ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಂಬುಲೆನ್ಸಿಗೆ ಕರೆ ಮಾಡಿದ್ದಾರೆ. 

ವಾಹನದೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಶಿವಕುಮಾರ ಇಟಗಿ ಅವರು ಅಗತ್ಯ ಉಪಚಾರ ನೀಡಿ, ಗರ್ಭಿಣಿಯನ್ನು ಮುಂಡರಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಗರ್ಭಿಣೆಗೆ ತೀವ್ರ ನೋವು ಕಾಣಿಸಿಕೊಂಡಿದೆ. ಶಿವಕುಮಾರ ಅವರು, ಆಶಾ ಕಾರ್ಯಕರ್ತೆಯರ ಸಹಾಯದಿಂದ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ಸಧ್ಯ ಮಗು ಹಾಗೂ ಬಾಣಂತಿ ಆರೋಗ್ಯವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT