ಶಾರ್ಟ್‌ ಸರ್ಕೀಟ್‌: ಮದ್ಯದಂಗಡಿಗೆ ಬೆಂಕಿ

7

ಶಾರ್ಟ್‌ ಸರ್ಕೀಟ್‌: ಮದ್ಯದಂಗಡಿಗೆ ಬೆಂಕಿ

Published:
Updated:
Deccan Herald

ಗದಗ: ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದ ಸಮೀಪ ಇರುವ ಪ್ರಿನ್ಸ್‌ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಕಟ್ಟಡದಲ್ಲಿ ಗುರುವಾರ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ಮೌಲ್ಯದ ಹಾನಿಯಾಗಿದೆ.

ವಾಸುದೇವ ಖಟವಟೆ ಎಂಬುವವರಿಗೆ ಸೇರಿದ ಮದ್ಯದಂಗಡಿ ಇದಾಗಿದ್ದು, ಘಟನೆಯಲ್ಲಿ ಪಿಠೋಪಕರಣಗಳು, ಪ್ರಿಡ್ಜ್‌ ಸುಟ್ಟು ಹೋಗಿದೆ.ಮದ್ಯಕ್ಕೆ ಬೆಂಕಿ ತಗುಲಿ ಕ್ಷಿಪ್ರಗತಿಯಲ್ಲಿ ಇಡೀ ಕಟ್ಟಡ ತುಂಬ ವ್ಯಾಪಿಸಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಬೆಂಕಿ ನಂದಿಸಿದರು. ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !