ಗದಗ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಲ್ಲು, ಚಪ್ಪಲಿ ಎಸೆದವರ ಮೇಲೆ ಕಠಿಣ ಕ್ರಮಕೈಗೊಳ್ಳದೇ, ಸರ್ಕಾರದ ಕೋಟ್ಯಂತರ ಆಸ್ತಿ ಮರಳಿಸಲು ಕಾರಣಿಕರ್ತರಾದ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿರುವುದು ಖಂಡನೀಯ’ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಅಕ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನೌಕರ ವರ್ಗ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡುವುದಾಗಿ ಸರ್ಕಾರ ಘೋಷಿಸುವುದು ಒಂದೇ ಬಾಕಿ ಇದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನ ಏನು ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ, ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯ ನಾಯಕರು, ದೇವಾನುದೇವತೆಗಳ ಚಿತ್ರದ ಮೆರವಣಿಗೆ ಮಾಡುವವರ ಮೇಲೆ ಗಲಾಟೆ ಮಾಡಲು ಪ್ರಚೋದನೆ ಮಾಡುವವರನ್ನು ರಕ್ಷಿಸುತ್ತಿದೆ ಎಂದರು.

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಮೆರವಣಿಗೆ ಮಸೀದಿ ಹತ್ತಿರ ತೆರಳುತ್ತಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮಸೀದಿ ಭಾಗದಿಂದ ಕಲ್ಲುಗಳು ಹಿಂದೂ ಕಾರ್ಯಕರ್ತರ ಮೇಲೆ, ಪೊಲೀಸರ್ ಮೇಲಿಯೂ ಬಿದ್ದಿವೆ. ಕಲ್ಲೆಸೆತದಿಂದ ಎಸ್ಪಿ ತಲೆಗೂ ಏಟು ಬಿದ್ದಿದೆ. ಇಬ್ಬರು ಕಾನ್ಸ್ಟೆಬಲ್ಗಳಿಗೆ ಗಾಯಗಳಾಗಿವೆ. ಕಲ್ಲು ತೂರಿದ್ದಾರೆ, ಚಪ್ಪಲಿ-ಶೂ ಎಸೆದಿದ್ದಾರೆ. ಆದರೆ, ಯಾರನ್ನೂ ಬಂಧಿಸಿರಲಿಲ್ಲ. ಹಿಂದೂ ಕಾರ್ಯಕರ್ತರು ಒತ್ತಡ ಹಾಕಿದ ಬಳಿಕ 8 ಜನರನ್ನು ಬಂಧಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದೇ? ಯಾವುದೇ ಮಸೀದಿ ಮುಂಭಾಗದಿಂದ ಹಿಂದೂ ಮೆರವಣಿಗೆ, ಗಣಪತಿ ಉತ್ಸವಗಳು, ಶಿವಾಜಿ ಜಯಂತಿ ಮೆರವಣಿಗೆ, ಕನಕದಾಸರ ಚಿತ್ರದ ಮೆರವಣಿಗೆ, ಬಸವೇಶ್ವರರ ಚಿತ್ರದ ಮೆರವಣಿಗೆ ರಸ್ತೆಯಲ್ಲಿ, ಮಸೀದಿ ಮುಂದೆ ಮಾಡಬಾರದೇ ಎಂದು ಅವರು ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.