ಗದಗ: ‘ಪಶು ಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ತಾಂತ್ರಿಕ ಜ್ಞಾನ ವಿನಿಮಯ ಅತ್ಯವಶ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2025-26ನೇ ಸಾಲಿನ ಪಶು ಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ಶನಿವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಪಶುಪಾಲನಾ ಕ್ಷೇತ್ರ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ವೈಜ್ಞಾನಿಕ ಪದ್ಧತಿ, ಹೊಸ ತಂತ್ರಜ್ಞಾನ ಮತ್ತು ಪ್ರಾಣಿ ಕಲ್ಯಾಣದ ಮೌಲ್ಯಗಳನ್ನು ಸಮನ್ವಯಗೊಳಿಸುವ ಮೂಲಕ ರೈತರ ಆದಾಯ ಹೆಚ್ಚಿಸಬಹುದು’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದೆ. ರಾಜ್ಯದ ಕೋಲಾರ, ಮಂಡ್ಯ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಹೈನುಗಾರಿಕೆ ರೈತರಿಗೆಲ್ಲ ಲಾಭದಾಯಕ ಕಸುಬಾಗಿದೆ. ಅವರಿಗೆ ಸಾಧ್ಯವಾಗಿದ್ದು ಇಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬ ಚರ್ಚೆಯಾಗಲಿ’ ಎಂದರು.

‘ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕಡಿಮೆ ಆಗಿರುವುದೇ ಗ್ರಾಮೀಣ ಭಾಗದ ಸಂಪತ್ತು ವೃದ್ಧಿಯಾಗದೀರಲು ಕಾರಣವಾಗಿದೆ. ದೇಶದ ಸಂಪತ್ತು ವೃದ್ಧಿಯಲ್ಲಿ ಹೈನುಗಾರಿಕೆ ಪ್ರಭಾವ ಅಧಿಕವೆಂದು ಅರಿತು, ತಾಂತ್ರಿಕತೆ ಬಳಸಿ ಅಭಿವೃದ್ಧಿಯಡೆಗೆ ಸಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಆರೋಗ್ಯ, ತಂತ್ರಜ್ಞಾನ ಹಾಗೂ ಕೃಷಿ ಕೇತ್ರಕ್ಕೆ ನೀಡುವಷ್ಟು ಪ್ರಾಮುಖ್ಯತೆ ಹೈನುಗಾರಿಕೆ ಕ್ಷೇತ್ರಕ್ಕೂ ನೀಡಿದ್ದರೇ, ಇಂದು ರೈತರ ಸಂಪತ್ತು ಅಧಿಕವಾಗುತ್ತಿತ್ತು. ರೈತರ ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರವಾಗಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಲಾಭವಾಗಿಸಲು ತಾಂತ್ರಿಕತೆ ಅಳವಡಿಕೆ ಅನಿವಾರ್ಯ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ‘ಇಂದು ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ರಾಜ್ಯ ಕೇಂದ್ರ ಸರ್ಕಾರಗಳು ಸಂಶೋಧನೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿವೆ. ಸರಿಯಾಗಿ ಸದ್ಬಳಕೆ ಆಗಲಿ ಎಂದರು.

‘ಈ ಸಮ್ಮೇಳನದಲ್ಲಿ ಜ್ಞಾನ ತಂತ್ರಜ್ಞಾನ ವಿನಿಮಯವಾಗಿ ಅದು ಸರಿಯಾಗಿ ಅನುಷ್ಠಾನ ಆಗಲಿ. ಕುರಿ, ಕೋಳಿ ಸೇರಿದಂತೆ ಹೈನುಗಾರಿಕೆ ಮೂಲಕ ತಂತ್ರಜ್ಞಾನ ಬಳಸಿ ಹೇಗೆ ಲಾಭದಾಯಕ ಮಾಡಬಹುದು ಎಂಬ ಕುರಿತು ಚರ್ಚೆಯಾಗಲಿ’ ಎಂದು ತಿಳಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ.ಪಿ. ಶ್ರೀನಿವಾಸ, ವಿಶ್ವವಿದ್ಯಾಲಯದ ಕುಲಪತಿಗಳು (ಪ್ರಭಾರ) ಹಾಗೂ ಕುಲಸಚಿವ ಪ್ರೊ.ಡಾ.ಸುರೇಶ್ ವಿ. ನಾಡಗೌಡರ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಸ್.ಜಿ. ಯಲಗೋಡ, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಬಿ. ರಾಮಚಂದ್ರ, ಬೀದರ ಕೆವಿಎಫ್ಎಸ್ಯು ಉಪಕುಲಪತಿ ಡಾ.ಸುರೇಶ್ ಎಸ್. ಹೊನ್ನಪ್ಪಗೊಳ, ಪಶು ವೈದ್ಯಕೀಯ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೃಷ್ಣ ಇಸ್ಲೂರ, ಹ್ಯೂಮೇನ್ ವರ್ಲ್ಡ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೇಷನ್ ಪ್ರತಿನಿಧಿ ರಮೇಶ್ ಭಜಂತ್ರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ (ರಾಜ್ಯ ವಲಯ) ಡಾ.ಎಚ್. ನಾಗರಾಜ ಇದ್ದರು.

ಗದಗ ಉಪನಿರ್ದೇಶಕ ಡಾ.ಎಚ್.ಬಿ. ಹುಲಗಣ್ಣವರ ಸ್ವಾಗತಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಆರ್.ವೈ. ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಾಹುಬಲಿ ಜೈನರ ನಿರ್ವಹಿಸಿದರು.

ಪ್ರಾಣಿಗಳ ಕೊನೆಗಾಲದಲ್ಲಿ ಕಾಳಜಿ ಮಾಡುವ ಮಾರ್ಗಗಳ ಕುರಿತು ಸಹ ಚರ್ಚೆಯಾಗಿ ಪರಿಹಾರ ಸಿಗಲಿ. ಪಶು ಸಂಗೋಪನಾ ಇಲಾಖೆ ಅಗತ್ಯವಾದ ಪ್ರಸ್ತಾವಗಳನ್ನು ಶೀಘ್ರವಾಗಿ ನೀಡಿದಲ್ಲಿ ಮುಂದಿನ ಬಜೆಟ್ನಲ್ಲಿ ಕೊಡಿಸಲಾಗುವುದು
- ಎಚ್.ಕೆ. ಪಾಟೀಲ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.