ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಗುಂದ | ಜಿಟಿಜಿಟಿ ಮಳೆ, ಕೃಷಿ ಕೆಲಸ ಸ್ಥಗಿತ

Published 7 ಜುಲೈ 2024, 16:01 IST
Last Updated 7 ಜುಲೈ 2024, 16:01 IST
ಅಕ್ಷರ ಗಾತ್ರ

ಮುಳಗುಂದ: ಪಟ್ಟಣ ಸೇರಿದಂತೆ ಸೊರಟೂರ, ಯಲಿಶಿರೂರ, ಚಿಂಚಲಿ, ಗ್ರಾಮಗಳ ವ್ಯಾಪ್ತಿಯಲ್ಲಿ ಭಾನುವಾರ ದಿನವಿಡೀ ಜಿಟಿಜಿಟಿ ಮಳೆ ಆಗಿದ್ದು, ಪರಿಣಾಮ ಕೃಷಿ ಕಾರ್ಯಗಳು ಸ್ಥಗಿತಗೊಂಡಿದೆ.

ಕಳೆದ 15 ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು, ಅಷ್ಟಾಗಿ ಮಳೆ ಆಗಿರಲಿಲ್ಲ. ಭಾನುವಾರ ಬೆಳಗಿನಿಂದ ಸಂಜೆವರೆಗೂ ಜಿಟಿಜಿಟಿಯಾಗಿ ಉತ್ತಮ ಮಳೆ ಆಗಿದೆ. ಹೆಸರು, ಶೇಂಗಾ, ಹತ್ತಿ ಬೆಳೆಗೆ ಪೂರಕವಾಗದೆ.

ದಿನವಿಡೀ ಮಳೆ ಇದ್ದ ಪರಿಣಾಮ ಕೃಷಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು, ರೈತರು ಮನೆಗೆ ಮರಳಿದರು. ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಸಾರ್ವಜನಿಕ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಕಂಡುಬಂದಿತು. ಚರಂಡಿಗಳು ತುಂಬಿ ಹರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT