ಗದಗ: ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನಕ್ಕೆ ಸೇರಿದ ಹುಲಕೋಟಿ ಗ್ರಾಮದಲ್ಲಿರುವ ಕೈಲಾಸ ಆಶ್ರಮದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಫಕೀರೇಶ್ವರ ಮಹಾಸಂಸ್ಥಾನ ಮಠದ ಫಕೀರೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಬಳಗಾನೂರಿನ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು, ಅಣ್ಣಿಗೇರಿಯ ರುದ್ರಮುನೀಶ್ವರ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ, ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಹ್ಮಕುಮಾರಿ ಜಯಂತಿ ಸಮ್ಮುಖ ವಹಿಸಿ ‘ನಮ್ಮ ಪೀಠದ ಗುರು ಪರಂಪರೆ’ ವಿಷಯದ ಕುರಿತು ಮಾತನಾಡುವರು.

ಸಂಜೆ 6ಕ್ಕೆ ಜಗನ್ಮಾತೆ ರಾಜರಾಜೇಶ್ವರಿ ಮತ್ತು ಶ್ರೀಗಳವರ ಹೂವಿನ ಪಲ್ಲಕ್ಕಿಯಲ್ಲಿ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಚಿವ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಮುಖಂಡರಾದ ಎಸ್.ಕೆ.ಪಾಟೀಲ, ರವಿ ಎಂ. ಮೂಲಿಮನಿ, ಕೆ.ಆರ್.ಪ್ರಭು, ಎನ್.ಆರ್.ಸಾವಕಾರ, ಜೆ.ಕೆ.ಜಮಾದಾರ, ಹಯಗ್ರೀವಾಚಾರ್, ಸಿ.ಬಿ.ಕರಿಕಟ್ಟಿ, ಎಂ.ಡಿ.ದುರ್ಗಣ್ಣವರ, ಶಿವರತ್ನಕುಮಾರ ಪಾಟೀಲ, ಡಿ.ಜಿ.ಜೋಗಣ್ಣವರ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.