ಶಿರಹಟ್ಟಿ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಘಟಕ ವತಿಯಿಂದ ನ.14ರಂದು ಹಮ್ಮಿಕೊಂಡ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕರಪತ್ರಗಳನ್ನು ಸಂಘದ ಪದಾಧಿಕಾರಿಗಳು ಭಾನುವಾರ ಸ್ಥಳೀಯ ನಿರೀಕ್ಷಣಾ ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ತುಳಿ ಹಾಗೂ ಕಾರ್ಯದರ್ಶಿ ಶರಣಪ್ಪ ಹೊಂಬಾಳಿ ಮಾತನಾಡಿ, ‘ಕಿತ್ತೂರು ಚನ್ನಮ್ಮ ಜಯಂತಿ ಹಾಗೂ ತಾಲ್ಲೂಕು ಮಟ್ಟದ ಸಮಾವೇಶವನ್ನು ನ.14ರಂದು ಹಮ್ಮಿಕೊಳ್ಳಲಾಗಿದೆ. ಅಂದು 12.30ಗಂಟೆಗೆ ಸ್ಥಳೀಯ ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ’ ತಿಳಿಸಿದರು.

ಸ್ಥಳೀಯ ಮೇಗೇರಿ ಓಣಿಯ ಈಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ನಡೆಯಲಿದೆ. ಫಕೀರ ಸಿದ್ದರಾಮ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಘದ ರಾಜ್ಯ ಘಟಕ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಜಿಲ್ಲಾ ಘಟಕ ಅಧ್ಯಕ್ಷ ಈರಣ್ಣ ಕರಿಬಿಸ್ಟಿ ಭಾಗವಹಿಸುವರು’ ಎಂದು ತಿಳಿಸಿದರು.

ರಾಜ್ಯ ಸಂಚಾಲಕರಾದ ಸೋಮಣ್ಣ ಡಾನ್ಗಲ್, ಯಲ್ಲಪ್ಪ ಇಂಗಳಗಿ, ಎಸ್.ಬಿ. ಹೊಸೂರ, ಯುವ ರುದ್ರಗೌಡ್ರು ಪಾಟೀಲ, ಸುರೇಶ ಬ್ಯಾಲಹುಣಸಿ, ಬಸವರಾಜ ವಡವಿ, ಫಕ್ಕೀರೇಶ ಎಮ್ಮಿಯವರ, ವೀರನಗೌಡ ಭರಮಗೌಡ್ರ, ಬಸವರಾಜ ಬಳೆಗಾರ, ಮಹೇಶ ಕಲ್ಲಪ್ಪನವರ, ಶರಣಪ್ಪ ಹೊಸೂರ, ಮಲ್ಲಿಕಾರ್ಜುನ ಕಬಾಡಿ, ಪ್ರವೀಣ ಚಬ್ಬಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.