ಶಿಗ್ಲಿಯ ಕೆ.ಜಿ. ಬದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಬಾಲಕಿಯರ ಶೌಚಾಲಯದ ಕಟ್ಟಡದ ಚಾವಣಿ ಶಿಥಿಲಗೊಂಡಿದ್ದು ಸ್ಲಾಬ್ ಕಳಚಿ ಬೀಳುತ್ತಿದೆ.
ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿರುವ ತೆರೆದ ಮೂತ್ರಾಲಯ
ಲಕ್ಷ್ಮೇಶ್ವರ ತಾಲ್ಲೂಕಿನ ಎಲ್ಲ ಶಾಲೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅರ್ಧಕ್ಕೆ ನಿಂತ ಶೌಚಾಲಯವನ್ನು ಆದಷ್ಟು ಬೇಗನೇ ಮುಗಿಸಲು ಕ್ರಮಕೈಗೊಳ್ಳಲಾಗುವುದು
ಎಚ್.ಎನ್.ನಾಯಕ ಬಿಇಒ
ಶೌಚಾಲಯದ ಚಾವಣಿ ಶಿಥಿಲ
ಶಿಗ್ಲಿ ಕೆ.ಜಿ. ಬದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕಿಯರ ಶೌಚಾಲಯದ ಚಾವಣಿ ಶಿಥಿಲಗೊಂಡಿದ್ದು ಸ್ಲಾಬ್ ಅಲ್ಲಲ್ಲಿ ಕತ್ತರಿಸಿ ಬೀಳುತ್ತಿದೆ. ಬಾಲಕಿಯರು ಶೌಚಾಲಯಕ್ಕೆ ಹೋದಾಗ ಅಪಾಯ ಸಂಭವಿಸುವ ಭಯವಿದೆ. ಅಲ್ಲದೆ ಇಡೀ ಕಟ್ಟಡ ಹಳೆಯದಾಗಿದ್ದು ಶಿಥಿಲಗೊಂಡಿದೆ. ‘ಬಾಲಕಿಯರ ಶೌಚಾಲಯದ ಸ್ಲಾಬ್ ಶಿಥಿಲಗೊಂಡಿದ್ದು ನಿಜ. ಇಡೀ ಕಟ್ಟಡ ಹಳೆಯದಾಗಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಮುಖ್ಯ ಶಿಕ್ಷಕ ಬಿ.ಜಿ. ದೊಡ್ಡಮನಿ ತಿಳಿಸಿದ್ದಾರೆ.