ರೋಣ: ‘ದೇಶವನ್ನು ಹೊಡೆದು ಆಳಲಿಚ್ಛಿಸುವ ರಾಜಕಾರಣಿಗಳಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕು. ಅಖಂಡ ಭಾರತದ ಕಲ್ಪನೆ, ರಾಷ್ಟ್ರಭಕ್ತಿ, ರಾಷ್ಟ್ರ ಪ್ರೇಮ ಹಿಂದೂಗಳಲ್ಲಿ ಪ್ರಜ್ವಲಿಸುವಂತಾಗಲಿ’ ಎಂದು ಹಿಂದೂ ಪರ ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು.
ಪಟ್ಟಣದ ಕೇಸರಿ ನಂದನ ಯುವಕರು ಸೋಮವಾರ ಹಮ್ಮಿಕೊಂಡಿದ್ದ ಅಖಂಡ ಭಾರತದ ಸಂಕಲ್ಪ ಯಾತ್ರೆಯ ಬೃಹತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಶಾಂತಿಧೂತರಿಂದಷ್ಟೇ ಅಲ್ಲ. ಅದಕ್ಕೂ ಮೊದಲೇ ಕ್ರಾಂತಿಕಾರಿಗಳ ಹೋರಾಟಕ್ಕೆ ಬ್ರಿಟಿಷರು ಮಣಿದಿದ್ದರು. ಎಲ್ಲ ಹೋರಾಟಗಾರ ಫಲವೇ 1947 ರ ಸ್ವಾತಂತ್ರ್ಯ. ಆದರೆ ಬಹುಜನರ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳದೆ ನಿರಾಶೆ ತಂದಿದ್ದು ಮಾತ್ರ ಇಂದಿಗೂ ನೋವಿನ ಸಂಗತಿ’ ಎಂದರು.
ಸಂಘದ ಪ್ರದಾನ ಕಾರ್ಯದರ್ಶಿ ರವಿ ಕೊಪ್ಪದ, ಸಂಜು ಉಳ್ಳಾಗಡ್ಡಿ, ಲೋಹಿತ್ ಕುಂಬಾರ, ಸಂತೋಷ ಪಲ್ಲೇದ, ಮಲ್ಲು ಸಂತೋಜಿ, ಶ್ರೀನಿವಾಸ್ ಮ್ಯಾಗೇರಿ ಸುನೀಲ ರಂಗರೇಜಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.