ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾಟೆ: ಮಂಜು ಡೈಮಂಡ್ ತರಬೇತಿ ಕೇಂದ್ರ ಸಾಧನೆ

Published 7 ಜುಲೈ 2024, 15:57 IST
Last Updated 7 ಜುಲೈ 2024, 15:57 IST
ಅಕ್ಷರ ಗಾತ್ರ

ಮುಂಡರಗಿ: ಈಚೆಗೆ ಗದುಗಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಮಂಜು ಡೈಮಂಡ್ ಮಿಕ್ಸ್ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರದ ಕರಾಟೆ ಪಟುಗಳು ವಿವಿಧ ಭಾಗಗಳಲ್ಲಿ ಸ್ಪರ್ಧಿಸಿ ಹಲವು ಪದಕಗಳನ್ನು ಗಳಿಸಿದ್ದಾರೆ.

ವಿಜೇತ ಕ್ರೀಡಾಪಟುಗಳ ವಿವರ: ಸಂಜನಾ ಹಾದಿಮನಿ ಕಟಾದಲ್ಲಿ ತೃತೀಯ, ಫೈಟ್‌ನಲ್ಲಿ ದ್ವಿತೀಯ ಸ್ಥಾನ. ಅಮೃತ ಬಡಿಗೇರ ಕಟಾದಲ್ಲಿ ದ್ವಿತೀಯ, ಫೈಟ್‌ನಲ್ಲಿ ದ್ವಿತೀಯ. ಅಭಿಷೇಕ್ ಮೂಖನವರ ಕಟಾದಲ್ಲಿ ತೃತೀಯ ಸ್ಥಾನ. ಅಬ್ದುಲ್ ಭಾಗವಾನ ಕಟಾದಲ್ಲಿ ದ್ವಿತೀಯ, ಫೈಟ್‌ನಲ್ಲಿ ದ್ವಿತೀಯ ಸ್ಥಾನ. ಶ್ರೀಕಾಂತ ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ಕ್ರೀಡಾಪಟುಗಳಿಗೆ ಕರಾಟೆ ತರಬೇತುದಾರರಾದ ಮಂಜುನಾಥ ಭಜಂತ್ರಿ ಹಾಗೂ ರಾಜಶ್ರೀ ಭಜಂತ್ರಿ ನಿಯಮಿತವಾಗಿ ತರಬೇತಿ ನೀಡಿದ್ದರು.

ಕರಾಟೆ ಸ್ಪರ್ಧೆ ಪ್ರಿಯರಾದ ಪಟ್ಟಣದ ಮಂಜು ವಡ್ಡಟ್ಟಿ, ಕೃಷ್ಣಪ್ರಸಾದಗೌಡ ಪಾಟೀಲ ಮತ್ತು ಸ್ವಾತಿ ಕಡಕಡಿ ಹಾಗೂ ಮತ್ತಿತರರು ವಿಜೇತ ಕ್ರಿಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT