ಪ್ರತಿ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ
ಇಲ್ಲಿನ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವ ಪ್ರತಿ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಇಟ್ಟಿದ್ದಾರೆ ಶಿಕ್ಷಕ ವಿಜಯಕುಮಾರ. ನರೇಗಲ್‌ನ ಕೆವಿಜಿ ಬ್ಯಾಂಕ್‌ನಲ್ಲಿ ತಾಯಿ-ಮಗುವಿನ ಹೆಸರಿನಲ್ಲಿ ಜಂಟಿ ಖಾತೆ ಮಾಡಿಸಿ ಅದರಲ್ಲಿ ಎಫ್‌ಡಿ ಇಟ್ಟಿದ್ದಾರೆ. 18 ವರ್ಷದ ನಂತರ ಪೂರ್ಣ ಹಣ ಸಿಗುತ್ತದೆ ಎನ್ನುವ ಬಾಂಡ್‌ನ್ನು ನೀಡಿದ್ದಾರೆ. ಹೀಗೆ ಈ ವರ್ಷ 6 ಮಕ್ಕಳಿಗೆ ಮಾಡಿಸಿದ್ದಾರೆ. 6 ಮಕ್ಕಳು ಟಿಸಿ ಬದಲಾವಣೆ ಸೇರಿ 12 ಮಕ್ಕಳು ಹೊಸದಾಗಿ ಶಾಲೆಗೆ ಸೇರಿಕೊಂಡಿದ್ದು ಸದ್ಯ 38 ಮಕ್ಕಳು ಕಲಿಯುತ್ತಿದ್ದಾರೆ.