ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಅಭಿಯಾನ: 2ನೇ ಡೋಸ್‌ ಸಿಗದೆ ಪರದಾಟ

ಶೇ.50 ಕ್ಕಿಂತಲೂ ಕಡಿಮೆ ಪ್ರಗತಿ
Last Updated 8 ಮೇ 2021, 3:32 IST
ಅಕ್ಷರ ಗಾತ್ರ

ಶಿರಹಟ್ಟಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೋವಿಡ್‌ ಲಸಿಕೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರವೇ ಹೇಳಿತ್ತು. ಆದರೆ, 60 ಮತ್ತು 45 ವರ್ಷ ಮೇಲ್ಪಟ್ಟ ತಾಲ್ಲೂಕಿನ ಸಾವಿರಾರೂ ಜನ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಕಾಯುವಂತಾಗಿದೆ.

ಶಿರಹಟ್ಟಿ ತಾಲ್ಲೂಕಿನಾದ್ಯಂತ ಈವರೆಗೂ 60 ವರ್ಷ ಮೇಲ್ಪಟ್ಟವರು 6,965 ಜನ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 45 ದಿನಗಳನ್ನು ಪೂರೈಸಿದ 1,595 ಜನ ಮಾತ್ರ ಎರಡನೇ ಲಸಿಕೆಯನ್ನು ಹಾಕಿಸಿಕೊಂಡದ್ದಾರೆ. 45 ವರ್ಷ ಮೇಲ್ಪಟ್ಟವರ ಪೈಕಿ ತಾಲ್ಲೂಕಿನಲ್ಲಿ ಈವರೆಗೂ 6,080 ಜನ ಮೊದಲ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಇದರಲ್ಲಿ 973 ಜನ ಮಾತ್ರ ಎರಡನೇ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಾಲ್ಲೂಕು ಆಸ್ಪತ್ರೆಯ ಅಂಕಿಅಂಶಗಳು ಹೇಳುತ್ತವೆ.

60 ವರ್ಷ ಮೇಲ್ಪಟ್ಟವರಲ್ಲಿ ಕೋವ್ಯಾಕ್ಸಿನ್‌ ಮೊದಲ ಲಸಿಕೆಯನ್ನು 6,326 ಜನ ಪಡೆದುಕೊಂಡಿದ್ದು, ಎರಡನೇ ಲಸಿಕೆಯನ್ನು 1,468 ಜನ ಪಡೆದುಕೊಂಡಿದ್ದಾರೆ. ಕೋವಿಶೀಲ್ಡ್‌ ಮೊದಲ ಲಸಿಕೆಯನ್ನು 639 ಜನ ಪಡೆದುಕೊಂಡಿದ್ದು, ಎರಡನೇ ಲಸಿಕೆಯನ್ನು 127 ಜನ ಮಾತ್ರ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಕೋವ್ಯಾಕ್ಸಿನ್‌ ಮೊದಲ ಲಸಿಕೆಯನ್ನು 4,647 ಜನ ಪಡೆದುಕೊಂಡಿದ್ದು, ಎರಡನೇ ಲಸಿಕೆಯನ್ನು 918 ಜನ ಪಡೆದುಕೊಂಡಿದ್ದಾರೆ. ಕೋವಿಶೀಲ್ಡ್‌ ಮೊದಲ ಲಸಿಕೆಯನ್ನು 433 ಜನ ಪಡೆದುಕೊಂಡಿದ್ದು, ಎರಡನೇ ಲಸಿಕೆಯನ್ನು ಕೇವಲ 55 ಜನ ಮಾತ್ರ ಪಡೆದುಕೊಂಡಿದ್ದಾರೆ.

‘ತಾಲ್ಲೂಕು ಆಸ್ಪತ್ರೆಯಲ್ಲಿ ಮೊದಲು ಲಸಿಕೆ ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡಿದ್ದೆ. ಸರ್ಕಾರದ ಆದೇಶದಂತೆ 45 ದಿನಗಳ ನಂತರ ಎರಡನೇ ಲಸಿಕೆ ಪಡೆದುಕೊಳ್ಳಲು ಈವರೆಗೂ ಆಗಿಲ್ಲವೆಂದು’ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಗರಿಕರೊಬ್ಬರು ತಿಳಿಸಿದರು.

ಸರ್ಕಾರದ ಆದೇಶದಂತೆ ಕೋವಿಡ್-19‌ ಮೊದಲ ಲಸಿಕೆ ಪಡೆದ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಎರಡನೇ ಲಸಿಕೆ ನೀಡಬೇಕು. 45 ವರ್ಷ ಮೇಲ್ಪಟ್ಟ ನಾಗರಿಕರು ಮೊದಲು ಲಸಿಕೆ ಪಡೆಯಲು ಬರುವ ಫಲಾನುಭವಿಗಳಿಗೆ ಸರ್ಕಾರದ ಮುಂದಿನ ಆದೇಶದವರೆಗೂ ಯಾವುದೇ ಕಾರಣಕ್ಕೂ ಲಸಿಕೆಯನ್ನು ನೀಡಬಾರದು. ಅತೀ ಅವಶ್ಯಕವಿದ್ದರೆ ಶೇ. 5ರಷ್ಟು ಮೊದಲ ಡೋಸ್‌ಗೆ ಬಳಸಬಹುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT