ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ | ರಭಸದ ಮಳೆ: ಮುಂಗಾರು ಹಂಗಾಮಿಗೆ ಅನುಕೂಲ

Published 22 ಜೂನ್ 2024, 16:11 IST
Last Updated 22 ಜೂನ್ 2024, 16:11 IST
ಅಕ್ಷರ ಗಾತ್ರ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಶನಿವಾರ ಅರ್ಧತಾಸಿಗೂ ಹೆಚ್ಚಿನ ಮಳೆ ಸುರಿಯಿತು ಜೋರಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಕಳೆದ ಒಂದು ವಾರದಿಂದ ರೈತರು ಮಳೆಗಾಗಿ ಕಾಯುತ್ತಿದ್ದರು. ರೈತರ ಪ್ರಾರ್ಥನೆಗೆ ಕೃಪೆ ತೋರಿದ ವರುಣದೇವ ಧಾರಾಕಾರವಾಗಿ ಸುರಿದು ರೈತರ ಸಂತಸ ಇಮ್ಮಡಿಗೊಳಿಸಿತು. ಹೆಸರು ಬೆಳೆಯುವ ಹಂತದಲ್ಲಿ ಇದ್ದು, ಈ ಮಳೆಯಿಂದ ಹೆಚ್ಚಿನ ಅನುಕೂಲವಾದಂತಾಗಿದೆ. ರಭಸದ ಮಳೆಯಿಂದ ಕೆಲವೆಡೆ ಬದುಗಳು ಕೊಚ್ಚಿಕೊಂಡು ಹೋಗಿವೆ.

ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಜಮೀನು ಜಲಾವೃತವಾದವು.

ಪರದಾಟ: ಪಟ್ಟಣದಲ್ಲಿ ಸಂಜೆ 4 ಗಂಟೆ ಹೊತ್ತಿಗೆ ರಭಸದಿಂದ ಮಳೆ ಆರಂಭವಾಗಿದ್ದರಿಂದ ಚರಂಡಿ ತುಂಬಿ ಹರಿದವು. ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶನಿವಾರವಾದರೂ ಕೆಲವು ಶಾಲೆಗಳು ಪೂರ್ಣ ದಿನ ನಡೆದ ಪರಿಣಾಮ ವಿದ್ಯಾರ್ಥಿಗಳು ಮನೆಗೆ ತೆರಳಲು ತೀವ್ರ ಪರದಾಡಿದರು.

ಕೆಲವು ರೈತರ ಆತಂಕ: ಮೊದಲು ಹೆಸರು ಬಿತ್ತನೆ ಮಾಡಿದ ರೈತರು ಈ ರಭಸದ ಮಳೆಯಿಂದ ಆತಂಕಗೊಳ್ಳುವಂತಾಗಿದೆ. ಅತಿ ತೇವಾಂಶ. ಹೆಚ್ಚಾಗಿ ಹಳದಿ ರೋಗಕ್ಕೆ ಹೆಸರು ಬೆಳೆ ತುತ್ತಾಗುವ ಲಕ್ಷಣಗಳು ಕಂಡು ಬರಬಹುದು ಎಂದು ರೈತರು. ಆತಂಕ ವ್ಯಕ್ತಪಡಿಸಿದರು.

ಆದರೆ ಹತ್ತಿ, ಮೆಕ್ಕೆಜೋಳ ಸೇರಿದಂತೆ ಕೆಲವು ಬೆಳೆಗಳಿಗೆ ಈ ಮಳೆ ವರದಾನವಾಗಿದೆ.

ನರೇಗಲ್:‌ ಉತ್ತಮ ಮಳೆ

ನರೇಗಲ್:‌ ಪಟ್ಟಣದ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಒಂದು ಉತ್ತಮವಾದ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನ 1 ಗಂಟೆಗೆ ಜಿಟಿಜಿಟಿಯಾಗಿ ಆರಂಭವಾದ ಮಳೆ ನಂತರ ಜೋರಾಗಿ ಸುರಿದಿದೆ. ನಂತರ ಸಂಜೆ ವರೆಗೆ ಜಿಟಿಜಿಟಿಯಾಗಿ ಬಂದಿದೆ.

ಜೋರಾಗಿ ಮಳೆ ಸುರಿದಿದ್ದರಿಂದ ನರಗುಂದ ಹೊರವಲಯದ ಜಮೀನುಗಳಲ್ಲಿ ನೀರು ನಿಂತುಕೊಂಡಿತ್ತು
ಜೋರಾಗಿ ಮಳೆ ಸುರಿದಿದ್ದರಿಂದ ನರಗುಂದ ಹೊರವಲಯದ ಜಮೀನುಗಳಲ್ಲಿ ನೀರು ನಿಂತುಕೊಂಡಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT