ಮುಂಡರಗಿ: ‘ಸಮಾಜದ ಉದ್ಧಾರಕ್ಕಾಗಿ ಜನಿಸಿದ ರೇಣುಕಾಚಾರ್ಯರು ಮನುಕುಲದ ಒಳಿತನ್ನು ಬಯಸಿದ್ದರು. ವೀರಶೈವ ಧರ್ಮದ ಮೂಲ ಪುರುಷರು. ಜಗತ್ತಿಗೆ ಶಾಂತಿ ಸಂದೇಶ ನೀಡಿದರು’ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಗತ್ತಿನಲ್ಲಿ ಶರಣರು, ಮಹಾತ್ಮರು, ಸಂತರು ಸಮಾಜದ ಒಳಿತನ್ನು ಬಯಸಿದ್ದರು. ಮಹಾತ್ಮರು ಸಮುದಾಯಗಳ ಏಳಿಗೆಯನ್ನು ಬಯಸಿದ್ದರು. ಮಹಾತ್ಮರ ಜೀವನಾದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ವೀರಮಹೇಶ್ವರ ಜಂಗಮ ಸಮಾಜದ ಅಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿ, ‘ರೇಣುಕಾಚಾರ್ಯರು 800ನೇ ಶತಮಾನದಲ್ಲಿ ವೀರಶೈವ ಸಿದ್ಧಾಂತ ಶಿಖಾಮಣಿ ಗ್ರಂಥ ರಚಿಸುವ ಮೂಲಕ ವಿಶ್ವ ಬಂಧುತ್ವ ಸಂದೇಶವನ್ನು ಸಾರಿದರು. ಸಮಾಜಕ್ಕೆ ಧರ್ಮ, ಆಚಾರ, ವಿಚಾರ, ಪೂಜೆಗಳ ಮಹತ್ವವನ್ನು ತಿಳಿಸಿಕೊಟ್ಟರು. ಲಿಂಗ, ಜಾತಿ, ಮತ, ಬೇಧ ತಾರತಮ್ಯಗಳನ್ನು ಹೋಗಲಾಡಿಸಿದವರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ತ್ವ ಸಿದ್ಧಾಂತವನ್ನು ಜಗತ್ತಿಗೆ ಸಾರಿದವರು’ ಎಂದರು.

ಮುಖಂಡರಾದ ಷಡಕ್ಷರಯ್ಯ ಅಳವಂಡಿಮಠ, ಹಾಲಯ್ಯ ಹಿರೇಮಠ, ಬಸಯ್ಯ ಹಿರೇಮಠ, ವಿ.ಜೆ. ಹಿರೇಮಠ, ಜಗದೀಶ ಪತ್ರಿಮಠ ಅಜಯ್ ಚುರ್ಚಿಹಾಳಮಠ, ವೀರೇಶ ಮುತ್ತಿನಪೆಂಡಿಮಠ, ಮಲ್ಲಯ್ಯ ಹಿರೇಮಠ, ಶಿವು ಹಿರೇಮಠ, ವೀರಯ್ಯ ಶಿರಹಟ್ಟಿಮಠ, ಗುರು ಶಿರಹಟ್ಟಿಮಠ, ಮಂಜು ಜಾಟಗೇರಿಮಠ, ನೇತ್ರಾವತಿ ಚಿಂಚಲಿಮಠ, ವಿನಯ್ ಗಂಧದ, ಜಯದೇವ ಹಿರೇಮಠ, ಕೊಟ್ರಯ್ಯ ಹಿರೇಮಠ, ಮುತ್ತಣ್ಣ ಅಳವಂಡಿಮಠ, ಮಹೇಶ್ವರಯ್ಯ ಹೊಸಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.