ಗಾಡಿ ಸಿಕ್ಕೊಂಡೇತಿ, ಮ್ಯಾಲೆ ಎತ್ತ ಬರ್ರೀ ಎಪ್ಪಾ..

7

ಗಾಡಿ ಸಿಕ್ಕೊಂಡೇತಿ, ಮ್ಯಾಲೆ ಎತ್ತ ಬರ್ರೀ ಎಪ್ಪಾ..

Published:
Updated:
Deccan Herald

ರೋಣ: ಒಂದು ವಾರದಿಂದ ಸೂಡಿ ವೃತ್ತದ ಬಳಿ ಇರುವಂತಹ ರಸ್ತೆಯೂ ಹಾಳಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

24X7 ಕುಡಿಯುವ ನೀರಿನ ಕಾಮಗಾರಿ ಸಲುವಾಗಿ ರಸ್ತೆಯನ್ನು ಮನಬಂದಂತೆ ಅಗೆದು ಮಣ್ಣು ಹಾಕಿದ್ದು ರಸ್ತೆಯಲ್ಲಿ ಗುಂಡಿ ತೆಗ್ಗುಗಳಿಂದ ಕೂಡಿದ್ದು ಈ ಹಿಂದೆ ರಸ್ತೆ ಅವ್ಯವಸ್ಥೆಯ ಕುರಿತಾಗಿ ಪ್ರಜಾವಾಣಿಯಲ್ಲಿ ವರದಿಯನ್ನು ಮಾಡಲಾಗಿದ್ದು ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಟ್ರಾಕ್ಟರ್ ಮೇಲಕ್ಕೆ ಎತ್ತಲು ಹರಸಾಹಸ:

ಭಾನುವಾರದಿಂದ ಪಟ್ಟಣದಲ್ಲಿ ತುಂತುರು ಮಳೆ ಆಗುತ್ತಿದ್ದು ಮಳೆಯಿಂದಾಗಿ ರಸ್ತೆಯೂ ಸಂಪೂರ್ಣ ಕೆಸರಿನಿಂದ ಆವೃತವಾಗಿದ್ದು ಸೋಮವಾರ ಕಲ್ಲು ಸಾಗಣಿ ಮಾಡುತ್ತಿದ್ದಂತಹ ಟ್ರಾಕ್ಟರ್ ರಸ್ತೆಯ ಮಧ್ಯೆ ಇರುವ ಕೆಸರಿನ ಗುಂಡಿಯಲ್ಲಿ ಸಿಕ್ಕಿಕೊಂಡಿದ್ದು ಮೇಲಕ್ಕೆ ಎತ್ತಲು ಮಾಲೀಕರು ಎರಡು ಗಂಟೆ ಕಾಲ ಹರಸಾಹಸ ಮಾಡಬೇಕಾಯಿತು.

ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸವಾರರು ಆಯ ತಪ್ಪಿ ಬೀಳುತ್ತಿದ್ದು ಬೃಹತ್ ಪ್ರಮಾಣದ ವಾಹನಗಳು ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡು ಮೇಲೆ ಬರಲು ಹರಸಾಹಸ ಪಡುತ್ತಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಖಂಡನೀಯ ಸಂಗತಿ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಛೀಮಾರಿ ಹಾಕಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !