ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್‍ನಲ್ಲಿಯೇ ಹೆರಿಗೆ

7

ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್‍ನಲ್ಲಿಯೇ ಹೆರಿಗೆ

Published:
Updated:
Deccan Herald

ಲಕ್ಷ್ಮೇಶ್ವರ: ಪಟ್ಟಣದ ಸಾರಿಗೆ ಘಟಕಕ್ಕೆ ಸೇರಿದ ಗುತ್ತಲದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಬಸ್‍ನಲ್ಲಿಯೇ ಬಾಲೆಹೊಸೂರು ಗ್ರಾಮದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಂಭವಿಸಿದೆ.

ಸೂರಣಗಿ ಆಸ್ಪತ್ರೆಗೆ ತೆರಳುವ ಸಂಬಂಧ ಬಾಲೆಹೊಸೂರು ಗ್ರಾಮದ ಗರ್ಭಿಣಿ ಕಾವ್ಯ ನಾಗಪ್ಪ ಮರಳಹಳ್ಳಿ ಅವರು ಗುತ್ತಲದಿಂದ ಬರುತ್ತಿದ್ದ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗದಲ್ಲಿ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡ ಸ್ವಲ್ಪ ಸಮಯದಲ್ಲಿಯೇ ಮಗುವಿಗೆ ಜನ್ಮ ನೀಡಿದರು.

ಚಾಲಕ ಎನ್.ಎಂ. ಉಪ್ಪಾರ ಮತ್ತು ನಿರ್ವಾಹಕ ಯು.ಎಂ. ಕಟ್ಟೆಣ್ಣವರ ಸಮಯಕ್ಕೆ ಸರಿಯಾಗಿ ಸೂರಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಸ್‌ ತಂದು ತಾಯಿ– ಮಗುವಿನ ಚಿಕಿತ್ಸೆಗೆ ನೆರವಾದರು. ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನಿಲ ತೋಟದ ಚಿಕಿತ್ಸೆ ನೀಡುತ್ತಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !