ಭಾನುವಾರ, ನವೆಂಬರ್ 28, 2021
20 °C

ಕೋಳಿವಾಡ ರಸ್ತೆ: ಸೂಚನಾ ಫಲಕ ಅಳವಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಗುಂದ: ಚಿಂಚಲಿ ಗ್ರಾಮದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಕೋಳಿವಾಡ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ರಸ್ತೆ   ಅಪಘಾತ ಸೂಚನಾ ಫಲಕ ಅಳವಡಿಸಬೇಕು. ಮುದುಕರಡ್ಡೆ ಕೆರೆ ಸಮೀಪದ ರಸ್ತೆ ತಿರುವಿನಲ್ಲಿ ತಡೆಗೋಡೆ ಮತ್ತು ಸೂಚನಾ ಫಲಕ ಹಾಕಿಲ್ಲ.  

ಈ ಮಾರ್ಗವು ಶಿರಹಟ್ಟಿ, ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನ ಸವಾರರು ಇದೇ ಮಾರ್ಗವನ್ನು ಬಳಸುತ್ತಾರೆ. ತಿರುವಿನಲ್ಲಿ ವೇಗವಾಗಿ ಬಂದ ವಾಹನಗಳು ಉರುಳಿ ಬಿದ್ದು, ಸರಣಿ ಅಪಘಾತಗಳು ಸಂಭವಿಸಿದ್ದೂ ಇದೆ.  ಹೀಗಾಗಿ, ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕೂಡಲೇ ಸೂಚನಾ ಫಲಕ ಅಳವಡಿಸಬೇಕು.
ಸಂಜೀವ ಹಳ್ಯಾಳ, ಚಿಂಚಲಿ ಗ್ರಾಮ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.