ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಜಿ.ಎಸ್‌.ಪಾಟೀಲ

Published 10 ಜುಲೈ 2024, 16:16 IST
Last Updated 10 ಜುಲೈ 2024, 16:16 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿ ಪಡೆಯುವ ಗುರಿ ಹೊಂದಬೇಡಿ. ಬಹಳಷ್ಟು ವಿಶಾಲವಾಗಿರುವ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳಲ್ಲಿ ಸಾಧನೆ ಮಾಡುವ ಮೂಲಕ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಬಿ.ಎಸ್‌.ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಯುವ ರೆಡ್‌ಕ್ರಾಸ್‌, ಸ್ಕೌಟ್‌ ಮತ್ತು ಗೈಡ್‌ ಹಾಗೂ ಎನ್.ಎಸ್.ಎಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಪದವಿ ಹಂತದಲ್ಲಿದ್ದಾಗ ಶ್ರದ್ಧೆ, ಏಕಾಗ್ರತೆಯಿಂದ ಅಧ್ಯಯನ ಮಾಡುವ ಮೂಲಕ ನಿಮ್ಮ ಮುಂದಿನ ಭವಿಷ್ಯ ಉತ್ತಮಗೊಳಿಸಿಕೊಳ್ಳಬೇಕು. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಅವಶ್ಯಕ. ಈ ಕೆಲಸವನ್ನು ಕಾಲೇಜಿನ ಬೋಧಕ ಸಿಬ್ಬಂದಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿರುವ ಕಾಯಂ ಸಿಬ್ಬಂದಿ ಕೊರತೆ ನೀಗಿಸಲು ನಮ್ಮ ಸರ್ಕಾರ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಿದೆ ಎಂದರು.

‘ಪಟ್ಟಣದಲ್ಲಿ ಬಾಲಕರ ವಸತಿ ನಿಲಯ ಸ್ಥಾಪನೆ ವಿಚಾರ ಈಗಾಗಲೇ ಸಚಿವರ ಗಮನಕ್ಕೆ ತಂದಿದ್ದು, ಈ ವರ್ಷ ಆಗದಿದ್ದರೂ ಮುಂದಿನ ವರ್ಷದಲ್ಲಿ ಸ್ಥಾಪನೆ ಆಗುತ್ತವೆ ಎಂಬ ವಿಶ್ವಾಸವಿದೆ. ನ್ಯಾಕ್‌ನಿಂದ ಬಿ++ ಮಾನ್ಯತೆ ಪಡೆದಿರುವ ಕಾಲೇಜು ‘ಎ’ ಮಾನ್ಯತೆ ಪಡೆಯುವಂತಗಲಿ. ಕಾಲೇಜಿನ ಅಭಿವೃದ್ಧಿಗೆ ಸದಾ ನಿಮ್ಮೊಂದಿಗೆ ಇರುತ್ತೇನೆ’ ಎಂದರು.

ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಜಿ. ಮಾತನಾಡಿ, ‘ನಮ್ಮ ಕಾಲೇಜಿನ ಹಲವು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷ ನಮ್ಮ ಕಾಲೇಜಿನಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿಸಿದ್ದೇವೆ’ ಎಂದರು.

ನಿಪ್ಪಾಣಿ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಬಿ.ಪೋಲಿಸಪಾಟೀಲ ಮಾತನಾಡಿದರು.

ಬಳಿಕ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಯತ, ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್, ಮುಖಂಡರಾದ ಚಂಬಣ್ಣ ಚವಡಿ, ಸಿದ್ದಪ್ಪ ಬಂಡಿ, ಶಿವರಾಜ ಘೋರ್ಪಡೆ, ಅಶೋಕಕುಮಾರ ಬಾಗಮಾರ, ಶ್ರೀಧರ ಗಂಜಿಗೌಡ್ರ, ಪ್ರಭು ಚವಡಿ, ಸುಬಾನಸಾಬ ಆರಗಿದ್ದಿ, ಉಮೇಶ ರಾಠೋಡ, ಸುರೇಂದ್ರ ರಾಯಬಾಗಿ, ಶರಣಪ್ಪ ರಡ್ಡೇರ, ಬಿ.ಎಂ.ಬಡಿಗೇರ, ಅಜಿತ್ ವಂದಕುದರಿ, ದಾದು ಹಣಗಿ, ಶರಣಪ್ಪ ಚಳಗೇರಿ, ಯಲ್ಲಪ್ಪ ಬಂಕದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT