ಶಿರಹಟ್ಟಿ: ತಾಲ್ಲೂಕಿನ ದೇವಿಹಾಳ ಗ್ರಾಮದ ಹೊಳಲಮ್ಮದೇವಿ ದೇವಸ್ಥಾನಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಕುರಿತು ಮಾತನಾಡಿದ ಅವರು, ‘ಗರ್ಭಗುಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಗೋಪುರ ಕೆಲಸ ಶೀರ್ಘದಲ್ಲಿ ಪೂರ್ಣಗೊಳ್ಳಲಿದೆ. ದೇವಸ್ಥಾನ ಆವರಣದಲ್ಲಿ ಹೊಳಲಮ್ಮ ದೇವಿ ಮಹಿಮೆ ವ್ಯಕ್ತಪಡಿಸುವ ಮೂರ್ತಿ ಸ್ಥಾಪನೆ, ಕಂಪೌಂಡ್ ಮರು ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ, ದೇವಸ್ಥಾನ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅಂದಾಜು ₹6.47 ಕೋಟಿ ವೆಚ್ಚದಲ್ಲಿ ನಡೆಸಲಾಗುವುದು’ ಎಂದರು.

ಬೆಳ್ಳೆಗ್ಗೆ ದೇವಿಗೆ ಪೂಜಾ ಕೈಂಕರ್ಯ ಜರುಗಿದವು. ಭಕ್ತರು ದೇವಿ ದರ್ಶನ ಪಡೆದರು. ಸುಜಾತಾ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ ಮಾಗಡಿ, ಶಿವನಗೌಡ ಪಾಟೀಲ, ಅಪ್ಪಣ್ಣ ಇನಾಮದಾರ, ಸಿದ್ದು ಪಾಟೀಲ, ಎಂ.ಕೆ. ಲಮಾಣಿ, ದೇವಪ್ಪ ಲಮಾಣಿ, ವೀರುಪಾಕ್ಷ ನಂದೇಣ್ಣವರ, ಡಿ.ಕೆ. ಹೊನ್ನಪ್ಪನವರ ಸೇರಿದಂತೆ ಮುಂತಾದವರು ಇದ್ದರು.

ಹೊಳಲಮ್ಮ ದೇವಿ ಗುಡ್ಡಕ್ಕೆ ರೋಪ್ ವೇ ನಿರ್ಮಿಸಬೇಕು ಎಂಬುದು ಭಕ್ತರ ಬೇಡಿಕೆ. ಈಗಾಗಲೇ ಈ ಕುರಿತು ಡಿಪಿಆರ್ ಸಿದ್ದಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು
ಎಚ್.ಕೆ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.