ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಬಿಂಕದಕಟ್ಟಿ ಕಿರುಮೃಗಾಲಯಕ್ಕೆ ಜೋಡಿ ಸಿಂಹಗಳ ಆಗಮನ

Last Updated 8 ಡಿಸೆಂಬರ್ 2022, 14:36 IST
ಅಕ್ಷರ ಗಾತ್ರ

ಗದಗ: ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ಇಬ್ಬರು ಹೊಸ ಅತಿಥಿಗಳು ಸೇರ್ಪಡೆಗೊಂಡಿದ್ದಾರೆ. ಇಂದೋರ್‌ನಿಂದ ನಾಲ್ಕು ವರ್ಷದ ‘ಶಿವಾ’ ಮತ್ತು ಮೂರು ವರ್ಷದ ‘ಗಂಗಾ’ ಎಂಬ ಜೋಡಿ ಸಿಂಹಗಳನ್ನು ಕರೆತರಲಾಗಿದೆ.

ನವದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗದಗ ಮೃಗಾಲಯದಿಂದ ಕಪಿಲ ಮತ್ತು ಕಸ್ತೂರಿ ಎಂಬ ಎರಡು ತೋಳಗಳನ್ನು ಇಂದೋರ್‌ನ ‘ಕಮಲಾ ನೆಹರೂ ಪ್ರಾಣಿ ಸಂಗ್ರಹಾಲಯ’ಕ್ಕೆ ಹಸ್ತಾಂತರಿಸಲಾಗಿದೆ.

ಇಂದೋರ್‌ನಿಂದ ಬಂದ ಜೋಡಿ ಸಿಂಹಗಳನ್ನು ಶಾಸಕ ಎಚ್.ಕೆ.ಪಾಟೀಲ ಬರಮಾಡಿಕೊಂಡರು.

‘ಸುವರ್ಣ ಸಂಭ್ರಮದಲ್ಲಿರುವ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಮತ್ತೆರಡು ಸಿಂಹಗಳ ಆಗಮನವಾಗಿದ್ದು, ಈ ಮೂಲಕ ಸಿಂಹಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಜತೆಗೆ ಈ ಮೃಗಾಲಯದ ಘನತೆ ಕೂಡ ಹೆಚ್ಚಳವಾಗಲಿದೆ. ಇದರ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲಾಗುವುದು’ ಎಂದರು.

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಈಗಾಗಲೇ ಒಂದು ಜೋಡಿ ಹುಲಿ, ಸಿಂಹಗಳು ಇವೆ. ಶಿವಾ ಮತ್ತು ಗಂಗಾ ಆಗಮನದಿಂದ ಕಿರುಮೃಗಾಲಯದಲ್ಲಿ ಸಿಂಹ ಘರ್ಜನೆ ಮತ್ತಷ್ಟು ಹೆಚ್ಚಲಿದ್ದು ಪ್ರವಾಸಿಗರ ಸಂಖ್ಯೆಯೂ ಏರಲಿದೆ ಎಂದು ಹೇಳಿದರು.

ಅರಣ್ಯ ಇಲಾಖೆ ಸಚಿವರಾಗಿದ್ದ ವೇಳೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಉದ್ಘಾಟಿಸಿ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಭಿವೃದ್ದಿಗೆ ದಿ.ಉಮೇಶ ಕತ್ತಿ ಅವರು ವಿಶೇಷ ಕಾಳಜಿ ತೋರಿದ್ದನ್ನು ಶಾಸಕ ಎಚ್.ಕೆ. ಪಾಟೀಲ ಈ ಸಂದರ್ಭದಲ್ಲಿ ಸ್ಮರಿಸಿದರು.

ಇದೇವೇಳೆ ಶಾಸಕ ಎಚ್.ಕೆ.ಪಾಟೀಲ ಅವರು ‘ನರಿ ಮನೆ’ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಮೃಗಾಲಯದ ಆರ್‌ಎಫ್‍ಒ ಪೂಜಾರ, ನಿಖಿಲ್‌ ಕುಲಕರ್ಣಿ ಇದ್ದರು.

***

ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಇಂದೋರ್‌ನಿಂದ ಬಂದಿರುವ ಶಿವಾ ಮತ್ತು ಗಂಗಾ ಎಂಬ ಜೋಡಿ ಸಿಂಹಗಳನ್ನು ವೈದ್ಯರ ಸಲಹೆ ಮೇರೆಗೆ 15ರಿಂದ 20 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ಬಳಿಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು

– ದೀಪಿಕಾ ಬಾಜಪೈ, ಡಿಎಫ್‌ಒ ಗದಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT