ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ|ನಮ್ಮ ಇತಿಹಾಸ ನಾವು ಅರಿಯಬೇಕು: ಡಾ.ಅನ್ನದಾನೀಶ್ವರ ಸ್ವಾಮಿಜಿ

Published : 10 ಜೂನ್ 2023, 13:53 IST
Last Updated : 10 ಜೂನ್ 2023, 13:53 IST
ಫಾಲೋ ಮಾಡಿ
Comments

ಮುಂಡರಗಿ: ಸ್ಥಳೀಯ ಉತ್ಸವಗಳನ್ನು ಆಚರಿಸುವ ಮೂಲಕ ಆಯಾ ಭಾಗದ ಇತಿಹಾಸ ಹಾಗೂ ಆಯಾ ಭಾಗದ ವೈಶಿಷ್ಟೆತೆಗಳನ್ನು ಯುವ ಜನತೆಗೆ ಪರಿಚಯಿಸಬೇಕು. ನಮ್ಮ ದೇಶದ ಇತಿಹಾಸ ತಿಳಿದುಕೊಳ್ಳುವುದರ ಜೊತೆಗೆ ಇತಿಹಾಸಕ್ಕೆ ನಮ್ಮ ಭಾಗದ ಕೊಡುಗೆಗಳನ್ನು ತಿಳಿದುಕೊಳ್ಳುವುದು ಉತ್ತಮ ಎಂದು ಡಾ.ಅನ್ನದಾನೀಶ್ವರ ಸ್ವಾಮಿಜಿ ತಿಳಿಸಿದರು.

ಇಲ್ಲಿಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶನಿವಾರ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಮುಂಡರಗಿ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ಥಳೀಯ ಉತ್ಸವಗಳ ಮೂಲಕ ಮಕ್ಕಳಿಗೆ ಹಾಗೂ ಯುವಕರಿಗೆ ಕಲೆ, ಸಾಹಿತ್ಯ, ಸಂಸ್ಕøತಿಗಳನ್ನು ಪರಿಚಯಿಸಬೇಕು. ದೇಶದೆಲ್ಲಡೆ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸಿದರು. ಕೇವಲ ಸಾಂಕೇತಿಕವಾಗಿ ಮುಂಡರಗಿ ಉತ್ಸವ ಆಚರಿಸುವ ಬದಲಾಗಿ ಅದ್ಧೂರಿಯಿಂದ ಹಾಗೂ ಅರ್ಥಪೂರ್ಣವಾಗಿ ಮುಂಡರಗಿ ಉತ್ಸವವನ್ನು ಆಚರಿಸಬೇಕು ಎಂದು ಸಲಹೆ ನಿಡಿದರು.

ಮುಂಡರಗಿ ಉತ್ಸವ ಸಮಿತಿ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, 2011ರಲ್ಲಿ ಮುಂಡರಗಿ ಉತ್ಸವವನ್ನು 2ದಿನಗಳ ಕಾಲ ಅದ್ಧೂರಿಯಿಂದ ಆಚರಿಸಲಾಗಿತ್ತು. ನಂತರದಲ್ಲಿ ಅಪ್ಪಳಿಸಿದ ಭೀಕರ ಬರಗಾಲ, ಕೊರೊನಾ ಹಾಗೂ ಮತ್ತಿತರ ಕಾರಣಗಳಿಂದ ಮುಂಡರಗಿ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಬರುವ ನವಂಬರ್‍ನಲ್ಲಿ 3 ದಿನಗಳ ಕಾಲ ಮುಂಡರಗಿ ಉತ್ಸವ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಮಾಜ ಸೇವಕ ಮಂಜುನಾಥ ಇಟಗಿ ಸ್ವಾಗತಿಸಿದರು. ಕನ್ನಡ ಕ್ರಾಂತಿ ಸೇನೆಯ ಮುಖಂಡ ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು.

ಮುಖಂಡರಾದ ವಿ.ಎಲ್.ನಾಡಗೌಡ್ರ, ಎ.ಕೆ.ಬೆಲ್ಲದ, ಕರಬಸಪ್ಪ ಹಂಚಿನಾಳ, ಜಿ.ವಿ.ಹಿರೇಮಠ, ಎ.ವೈ.ನವಲಗುಂದ, ಕೊಟ್ರೇಶ ಅಂಗಡಿ, ಕಾಂತರಾಜ ಹಿರೇಮಠ, ಶಿವಪ್ಪ ಚಿಕ್ಕಣ್ಣವರ, ನಾಗೇಶ ಹುಬ್ಬಳ್ಳಿ, ರುದ್ರಗೌಡ ಪಾಟೀಲ, ಸುಭಾಸ ಗುಡಿಮನಿ, ಎಸ್.ಎಸ್.ಗಡ್ಡದ, ಅಶೋಕ ಹುಬ್ಬಳ್ಳಿ, ಪಾಲಾಕ್ಷಿ ಗಣದಿನ್ನಿ, ವೈ.ಎಚ್.ಬಚನಹಳ್ಳಿ, ಯಲ್ಲಪ್ಪ ಹುಲಗೇರಿ, ಆರ್.ವೈ.ಪಾಟೀಲ, ಅಶೋಕ ಮಾನೆ, ಉಮೇಶ ಕೊರಡಕೇರಿ, ಆನಂದ ರಾಮೇನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT