ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟರಾಜರು ಕರುನಾಡ ನೆಲದ ಪುಣ್ಯ

ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗವಾಯಿಗಳ 104ನೇ ಜಯಂತಿ ಆಚರಣೆ; ಗಣ್ಯರ ಪ್ರಶಂಸೆ
Last Updated 4 ಮಾರ್ಚ್ 2017, 6:49 IST
ಅಕ್ಷರ ಗಾತ್ರ

ಗದಗ: ದೀಪ ಉರಿದು ಬೆಳಕು ನೀಡು ವಂತೆ ಅಂಧ, ಅನಾಥ ಮಕ್ಕಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾ ಗಿಟ್ಟ  ಪುಟ್ಟರಾಜ ಕವಿ ಗವಾಯಿಗಳವರು ನಮ್ಮ ಕರುನಾಡ ನೆಲದ ಪುಣ್ಯ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ ಸಂಕನೂರ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮ ದಲ್ಲಿ ಶುಕ್ರವಾರ ನಡೆದ ಪುಟ್ಟರಾಜ ಕವಿ ಗವಾಯಿಗಳವರ 104ನೇ ಜಯಂತ್ಯು ತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಟ್ಟರಾಜರು ಸಂಗೀತ ಕ್ಷೇತ್ರದ ಮೇರು ಪರ್ವತ. ಆಧ್ಯಾತ್ಮ, ಧಾರ್ಮಿಕ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರ. ಮನುಷ್ಯನೊಬ್ಬ ತನ್ನ ಜೀವಿತಾವಧಿಯಲ್ಲಿ ಈ ಸಮಾಜಕ್ಕೆ ಏನೆಲ್ಲಾ ಕೊಡುಗೆ ನೀಡ ಬಹುದೋ ಅದೆಲ್ಲವನ್ನೂ ಪುಟ್ಟರಾಜರು ನೀಡಿದ್ದಾರೆ. ಸ್ವತಃ ಅಂಧರಾಗಿದ್ದರೂ ಕನ್ನಡ, ಹಿಂದಿ,ಸಂಸ್ಕೃತದಲ್ಲಿ 60 ಮೇರು ಕೃತಿಗಳನ್ನು ರಚಿಸಿದರು.

16 ವಾದ್ಯಗಳು ಅವರಿಗೆ ಕರಗತವಾಗಿತ್ತು. ಸಂಗೀತ, ಸಂಸ್ಕೃತ ಹಾಗೂ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಸಾವಿರಾರು ಬಡಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಸಂಸ್ಥೆ ಸಿಬ್ಬಂದಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಪುಟ್ಟರಾಜರು ಕಂಡ ಕನಸನ್ನು ನನಸು ಮಾಡಬೇಕು ಎಂದು ನುಡಿದರು.

ಪುಟ್ಟರಾಜ ಗವಾಯಿಗಳ ಅಂಧರ ಶಿಕ್ಷಣ ಸಂಸ್ಥೆಗೆ ವಾಚನಾಲಯ ಸೌಲಭ್ಯ ಕಲ್ಪಿಸಲು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ₹ 5 ಲಕ್ಷ ಅನುದಾನ ನೀಡ ಲಾಗುವುದು ಎಂದರು.

ನೊಂದವರ ನೋವು ನಿವಾರಿಸಲು ಪುಟ್ಟರಾಜರು ಶ್ರಮಿಸಿದರು. ಅವರು ತೋರಿಸಿದ ಪರೋಪಕಾರ ಬಡವರ ಕಣ್ಣೀರು ಒರೆಸುವ  ಗುಣವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಅಡ್ನೂರ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿದರು.

ಭವ್ಯ ಮೆರವಣಿಗೆ: ಪುಟ್ಟರಾಜರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಕಲಾವಾದ್ಯಗ ಳೊಂದಿಗೆ ಪುಟ್ಟರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನ ಸಾಹಿತಿ ಚಟ್ನಳ್ಳಿ ಮಹೇಶ ಅವರು ಪುಟ್ಟರಾಜರಕುರಿತು ಉಪನ್ಯಾಸ ನೀಡಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕಲಾ ವಿದರು ಸಂಗೀತ ಸೇವೆ ನೀಡಿದರು.  ಕಲಾವಿದ ಪಂ. ಫಕ್ಕೀರೇಶ ಕಣವಿ ಗವಾ ಯಿಗಳಿಂದ ಸಂಗೀತ ಸೇವೆ ನಡೆಯಿತು. ಪಿಜಿಎಎಸ್ ಸಮಿತಿ ವ್ಯವಸ್ಥಾಪಕ ಬಸವ ರಾಜಸ್ವಾಮಿ ಹಿಡ್ಕಿಮಠ ಅಧ್ಯಕ್ಷತೆ ವಹಿಸಿ ದ್ದರು. ಪ್ರಾಚಾರ್ಯ ವಿ.ಬಿ.ಗುರುಮಠ  ಹಾಜರಿದ್ದರು.

ಬೃಹತ್‌ ಕೇಕ್‌ ಆಕರ್ಷಣೆ
ಪುಟ್ಟರಾಜ ಕವಿ ಗವಾಯಿಗಳ 104ನೇ ಜಯಂತಿ ಅಂಗವಾಗಿ 104 ಕೆ.ಜಿ ತೂಕದ ಬೃಹತ್‌ ಕೇಕ್‌ ಕತ್ತರಿಸಲಾಯಿತು. ಪುಟ್ಟರಾಜರ ಭಾವಚಿತ್ರ, ಅವರ ನೆಚ್ಚಿನ ವೀಣೆ ಆಕಾರದಲ್ಲಿ ಆಕರ್ಷಕವಾಗಿ ಕೇಕ್‌ ವಿನ್ಯಾಸಗೊಳಿಸಲಾಗಿತ್ತು.  ನಗರಸಭೆ ಅಧ್ಯಕ್ಷ ಪೀರಸಾಬ್ ಕೌತಾಳ ಅವರು ಈ ಕೇಕ್‌ ಸಿದ್ಧಪಡಿಸಲು ವಿಶೇಷ ಆಸಕ್ತಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT