ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ

Last Updated 1 ನವೆಂಬರ್ 2014, 7:47 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಚನ್ನಮ್ಮ. ಅವಳ ಸ್ವಾಭಿ­ಮಾನ, ಶೌರ್ಯ, ದಿಟ್ಟತನ, ಸಾಹಸ, ಎದೆ­ಗಾರಿಕೆಯನ್ನು ಪ್ರತಿಯೊಬ್ಬರೂ ಆದರ್ಶವಾಗಿಸಿ­ಕೊಳ್ಳಬೇಕು’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಕರೆ ನೀಡಿದರು.

ಗಜೇಂದ್ರಗಡ–ಉಣಚಗೇರಿ ವೀರಶೈವ ಪಂಚಮಸಾಲಿ ಸಮಾಜ ವತಿಯಿಂದ ಗುರುವಾರ ಇಲ್ಲಿನ ಮೈಸೂರಮಠದಲ್ಲಿ ಆಯೋಜಿಸಲಾಗಿದ್ದ ‘ವೀರ­ರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಿತ್ತೂರನ್ನು ದೇಸಾಯಿಗಳು ಆಳುತ್ತಿದ್ದರು. ದೇಸಾಯಿ ಮಲ್ಲಸರ್ಜನ ನಿಧನದ ನಂತರ ಶಿವಲಿಂಗಗ ರುದ್ರಸರ್ಜ ಆಡಳಿತಕ್ಕೆ ಬಂದ. ಅವನು ಗಂಡು ಸಂತಾನವಿಲ್ಲದೆ ನಿಧನವಾದಾಗ ಕಿತ್ತೂರು ಬಡ­ವಾ­ಯಿತು. ಆಗ ರಾಣಿ ಚನ್ನಮ್ಮ ಎಚ್ಚರಿಕೆಯಿಂದ ಕಿತ್ತೂರು ಪರ­ಕೀಯರ ಕೈಸೇರುವುದನ್ನು ತಪ್ಪಿಸಲು ಬಾಳಪ್ಪ­ಗೌಡರ ಮಗ ಶಿವಲಿಂಗಪ್ಪನನ್ನು ದತ್ತು ತೆಗೆದು­ಕೊಂಡಳು’ ಎಂದರು.

‘ಧಾರವಾಡದ ಬ್ರಿಟಿಷ್‌ ಕಲೆಕ್ಟರ್‌ ಜಾನ್‌ ಥ್ಯಾಕರೆ ದತ್ತು ಪುತ್ರರಿಗೆ ಹಕ್ಕಿಲ್ಲವೆಂಬ ನೀತಿಯಂತೆ ಚನ್ನಮ್ಮಳ ದತ್ತು ಸ್ವೀಕಾರವನ್ನು ಪ್ರಶ್ನಿಸಿ ತನ್ನ ಪ್ರತಿನಿಧಿಯನ್ನು ಕಿತ್ತೂರಿಗೆ ಅಟ್ಟಿ ಅದರ ಖಜಾನೆಗೆ ಬೀಗ ಮುದ್ರೆ ಹಾಕಿಸಿ ದತ್ತು ಸ್ವೀಕಾರ ಪ್ರಶ್ನೆ ಇತ್ಯರ್ಥ ಆಗುವವರೆಗೂ ಅಲ್ಲಿ ಕಾವಲು ಇರಿಸಿದನು. ರಾಣಿ ಚನ್ನಮ್ಮ ಬ್ರಿಟಿಷರೊಂದಿಗೆ ವ್ಯವಹರಿಸಿ ವಿಫಲಳಾದಳು. ಕಿತ್ತೂರು ಬ್ರಿಟಿಷ್‌ ಸಂಬಂಧಗಳು ಹದಗೆಟ್ಟು ಕೊನೆಗೆ ಅವೆರಡರ ಮಧ್ಯೆ ಯುದ್ಧದಲ್ಲಿ ಸೋತು ಶತೃಗಳ ವಶವಾದಳು. ಬೈಲಹೊಂಗಲದಲ್ಲಿ ಬಂಧಿಸಲಾಯಿತು ಎಂದರು.

ಟಿ.ಎಸ್‌.ರಾಜೂರ ಅಧ್ಯಕ್ಷತೆ ವಹಿಸಿದ್ದರು. ಮೈಸೂರಮಠದ ವಿಜಯಮಹಾಂತ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಹಾವೇರಿ ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಚಂಬಣ್ಣ ಚವಡಿ, ಪವಾಡೆಪ್ಪ ಮ್ಯಾಗೇರಿ, ಬಸವರಾಜ ಪುರ್ತಗೇರಿ, ಈಶಣ್ಣ ಮ್ಯಾಗೇರಿ, ಪ್ರಭು ಚವಡಿ, ಪರಪ್ಪ ಸಂಗನಾಳ, ಈಶಪ್ಪ ಪತಂಗರಾಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT