ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರು, ನೀರು, ಶಿಕ್ಷಣಕ್ಕೆ ಆದ್ಯತೆ

ಮುಂಡರಗಿ ಪುರಸಭೆ: ₹ 14,88,09,753 ಆದಾಯ, ₹ 14,68,81,540 ವೆಚ್ಚ ನಿರೀಕ್ಷೆ
Last Updated 20 ಫೆಬ್ರುವರಿ 2017, 6:23 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಈಚೆಗೆ ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ₹ 19,28,213 ಉಳಿತಾಯ ಬಜೆಟ್‌ ಮಂಡಿಸಿದರು. ಪುರಸಭೆಯ ವಿವಿಧ ಮೂಲಗಳಿಂದ ₹ 14,88,09,753 ಆದಾಯವನ್ನು ನಿರೀಕ್ಷಿಸಿಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹ 14,68,81,540 ವೆಚ್ಚ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಬಜೆಟ್ ಮಂಡನೆ ನಂತರ ಸದಸ್ಯ ರಿಂದ ಅನುಮೋದನೆ ಪಡೆದರು.ಬಜೆಟ್‌ನಲ್ಲಿ ಎಸ್‌.ಸಿ, ಎಸ್‌.ಟಿ ಫಲಾ ನುಭವಿಗಳ ಕಲ್ಯಾಣಕ್ಕಾಗಿ ಪ್ರಸಕ್ತ ಸಾಲಿ ನಲ್ಲಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಸ್‌.ಸಿ, ಎಸ್‌.ಟಿ ಫಲಾನುಭವಿಗಳಿಗೆ ಸೂರು, ಶುದ್ಧ ಕುಡಿ ಯುವ ನೀರು ಪೂರೈಕೆ ಹಾಗೂ ಶಿಕ್ಷಣ ಕ್ಕಾಗಿ ಸಹಾಯಧನ ನೀಡುವ ಸಂಕಲ್ಪ ವನ್ನು ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ₹ 2 ಕೋಟಿ ವೆಚ್ಚ ದಲ್ಲಿ 2 ನೆಲಮಟ್ಟದ ಜಲ ಸಂಗ್ರಹಾಲಯ ನಿರ್ಮಿಸಿ ದಿನದ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ವಿವಿಧ ಭಾಗಗಳಲ್ಲಿ ಈಗಾಗಲೆ 9 ಶುದ್ಧ ಕುಡಿ ಯುವ ನೀರಿನ ಘಟಕಗಳಿದ್ದು, 3 ಘಟಕ ಗಳು ನಿರ್ಮಾಣ ಹಂತದಲ್ಲಿವೆ ಎಂದರು.

ಪಟ್ಟಣದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳುವ ಪ್ರತಿ ಫಲಾನುಭವಿಗೆ ಪುರಸಭೆಯಿಂದ ನೀಡುವ ₹ 5,333 ಸಹಾಯ ಧನದ ಬದಲಾಗಿ ಎಸ್ಎಫ್‌ಸಿ ಮೂಲಕ ಹೆಚ್ಚುವರಿಯಾಗಿ ₹ 4,667 ಸೇರಿಸಿ ಒಟ್ಟು ₹ 10 ಸಾವಿರ ನೀಡಲಾ ಗುವುದು ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್, ಸ್ಥಾಯಿ ಸಮಿತಿ ಅಧ್ಯಕ್ಷ ಪರುಶುರಾಮ ಕರಡಿಕೊಳ್ಳ, ಮುಖ್ಯಾಧಿ ಕಾರಿ ಎಂ.ಎ.ನೂರುಲ್ಲಾಖಾನ್, ಸದಸ್ಯ ರಾದ ಚಂದ್ರಶೇಖರ ಬಡಿಗೇರ, ರಾಘ ವೇಂದ್ರ ಕುರಿಯವರ, ಕೊಟ್ರಮ್ಮ ಇಟಗಿ, ಪ್ರಭು ಅಬ್ಬಿಗೇರಿ, ರೇಖಾ ದೇಸಾಯಿ, ಶಾರದಾ ದೇಸಾಯಿ, ಫಕ್ರುಸಾಬ್ ಹಾರೂಗೇರಿ, ಮುದುಕಪ್ಪ ಕುಂಬಾರ, ಬಸವರಾಜ ರಾಮೇನಹಳ್ಳಿ, ದಾನೇಶ್ವರಿ ಭಜಂತ್ರಿ, ಸುರೇಶ ಮಾಳೆಕೊಪ್ಪ, ಲಕ್ಷ್ಮೀ ದೇವಿ ಮಾಗಡಿ, ಪ್ರೇಮವ್ವ ಗಣದಿನ್ನಿ, ಶಾಂತವ್ವ ಬಳ್ಳಾರಿ, ಸೋಮನಗೌಡ ಗೌಡ್ರ, ರೀಹಾನಬೇಗಂ ಕೆಲೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT