ಗದಗ: ಇಲ್ಲಿನ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ಮೇಲೆ ಅಳವಡಿಸಿರುವ ಸೌರವಿದ್ಯುತ್ ಘಟಕವನ್ನು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು. ಬೆಂಗಳೂರು ಮೂಲದ ಆರ್ಬ್ ಎನರ್ಜಿ ಸಂಸ್ಥೆ ಈ ಘಟಕವನ್ನು ಅಳವಡಿಸಿದೆ.

‘ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಬೇಕು. ಇಂತಹ ಪರಿಸರ ಸ್ನೇಹಿ ಇಂಧನ ಮೂಲಗಳ ಬಳಕೆಯಿಂದ ಜಲವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಡಾ.ಕೆ.ಡಿ. ಘೋಡ್ಕಿಂಡಿ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಕಟ್ಟಡದ ಮೇಲೆ ಸೌರವಿದ್ಯುತ್ ಘಟಕ ಅಳವಡಿಸಿಕೊಂಡಿರುವ ಡಾ. ದಾನೇಶ ದೇಸಾಯಿ ಅವರನ್ನು ಅಭಿನಂದಿಸಿದರು.

‘ವಿದ್ಯುತ್ ಕೊರತೆ ನೀಗಿಸುವಲ್ಲಿ ಸೌರವಿದ್ಯುತ್ ಬಳಕೆ ಅತ್ಯುತ್ತಮ ವಿಧಾನ’ ಎಂದು ಡಾ. ಸೋಲಮನ್ ಅಭಿಪ್ರಾಯಪಟ್ಟರು.

ಆರ್ಬ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ಚೇತನ್, ಈ ಘಟಕದ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಮಧ್ಯಮ ಪ್ರಮಾಣದ (ಎಸ್‌ಎಂಇ) ಕೈಗಾರಿಕಾ ಸಂಸ್ಥೆಗಳಿಗೆ ಇಂತಹ ಘಟಕ ಅಳವಡಿಸಿಕೊಳ್ಳಲು ಸಾಲದ ನೆರವಿನೊಂದಿಗೆ ಸೌಲಭ್ಯ ಕಲ್ಪಿಸುತ್ತದೆ’ಎಂದರು.

ಬೂದೀಶ್ವರ ಸ್ವಾಮೀಜಿ, ಡಾ.ದಿಲೀಪ್ ಹೆಮ್ಮಾಡಿ, ಚಂದ್ರಶೇಖರ ಬಾಗಲಕೋಟೆ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.