ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲಿಗಳಿಂದ ವಿಧಾನಸೌಧ ಚಲೋ

Last Updated 16 ಜುಲೈ 2013, 7:24 IST
ಅಕ್ಷರ ಗಾತ್ರ

ಗದಗ: ವಸತಿ ಹಾಗೂ ಕಲ್ಯಾಣ ಸೌಲಭ್ಯಗಳ ಜಾರಿಗೆ ಒತ್ತಾಯಿಸಿ ಹಮಾಲಿ ಕಾರ್ಮಿಕರು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಹಮಾಲರ ಸಂಘದ ಜಿಲ್ಲಾ ಸಂಚಾಲಕ ಮಹಾಗುಂಡಪ್ಪ ಅಂಗಡಿ, ಬೆಂಗಳೂರಿನಲ್ಲಿ 18ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿ ಸಲು 17ರಂದು ಗದಗ ರೈಲ್ವೆ ನಿಲ್ದಾಣ ದಿಂದ 300 ಮಂದಿ ಬೆಂಗಳೂರಿಗೆ ಹೊರಡಲಿದ್ದಾರೆ.

ರಾಜ್ಯದ ಎಪಿಎಂಸಿ  ಮಾರುಕಟ್ಟೆಗಳಲ್ಲಿ ಅಕ್ಕಿ ಗಿರಣಿ, ಎಣ್ಣೆ, ಬೇಳೆ ಮಿಲ್‌ಗಳಲ್ಲಿ, ಎಫ್‌ಸಿಐ ಗೋದಾಮು,  ಸೆಂಟ್ರಲ್ ಮತ್ತು ಸ್ಟೇಟ್ ವೇರ್ ಹೌಸ್, ಆಹಾರ ನಿಗಮ ಮತ್ತು ಪಾನೀಯ ನಿಗಮ, ರೇಷ್ಮೆ ಮಾರುಕಟ್ಟೆ, ರೈಲ್ವೆ ಗೂಡ್ ಶೆಡ್, ಸರ್ಕಾರಿ, ಖಾಸಗಿ ಬಸ್ ನಿಲ್ದಾಣಗಳು, ನಗರ, ಗ್ರಾಮೀಣ ಮಾರುಕಟ್ಟೆ ಪ್ರದೇಶಗಳಲ್ಲಿ ಸುಮಾರು ಐದು ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಹಲವು ವರ್ಷ ಗಳಿಂದ ಮೂಟೆ  ಹೊರುತ್ತಾ ಕನಿಷ್ಟ ಸೌಲಭ್ಯಗಳಿಲ್ಲದೆ ದುಡಿ ಯುತ್ತಿದ್ದಾರೆ ಎಂದು ವಿವರಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೇವಲ ಸೀಜನ್ ವೇಳೆಯಲ್ಲಿ ಮಾತ್ರ ಸಿಗುವ ಕೂಲಿಯೇ ಇವರಿಗೆ ಜೀವನಾಧಾರ. ಉಳಿದಂತೆ ಆರೇಳು ತಿಂಗಳು ನಿರುದ್ಯೋಗಿಗಳಾಗಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಅಳಲು ತೋಡಿ ಕೊಂಡರು.

ಎಪಿಎಂಸಿಗಳಲ್ಲಿ ಹಲವು ವರ್ಷ ಗಳಿಂದ ಹಮಾಲಿ ಕಾರ್ಮಿಕರು ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ. ಹಮಾಲಿ ಕೆಲಸ ಅತ್ಯಂತ ಶ್ರಮದಾಯಕ ಕೆಲಸ ವಾಗಿದ್ದು, ಕೆಲಸದ ವೇಳೆ ಸಂಭವಿಸುವ  ಅವಘಡ, ಸಾವು ಮತ್ತು ನೋವುಗಳಿಗೆ ಮಾಲೀಕರಾಗಲಿ, ಎಪಿಎಂಸಿಗಳು ಕಾಳಜಿವಹಿಸುತ್ತಿಲ್ಲ.

ಹೀಗಾಗಿ ಅವರಿಗೆ ವೈದ್ಯಕೀಯ ಪರಿಹಾರದಂತ ಸೌಲಭ್ಯ ನೀಡಲು ಎಪಿ ಎಂಸಿಗಳಲ್ಲಿ  ಕಲ್ಯಾಣ ನಿಧಿ  ಸ್ಥಾಪಿಸಬೇಕು ಎಂದು ಆಗ್ರಹಿ ಸಿದ್ದಾರೆ.
ಬೆಂಗಳೂರಿನಲ್ಲಿ 18ರಂದು ನಡೆಯುವ ಹಮಾಲರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಮಾಲಿಗಳು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT