ಸರ್ಕಾರ ಉರುಳಿಸಲಿಕ್ಕಾಗಿಯೇ ಸಿದ್ದರಾಮಯ್ಯ ವಿದೇಶಕ್ಕೆ: ಬಸನಗೌಡ ಪಾಟೀಲ ಯತ್ನಾಳ

7

ಸರ್ಕಾರ ಉರುಳಿಸಲಿಕ್ಕಾಗಿಯೇ ಸಿದ್ದರಾಮಯ್ಯ ವಿದೇಶಕ್ಕೆ: ಬಸನಗೌಡ ಪಾಟೀಲ ಯತ್ನಾಳ

Published:
Updated:

ವಿಜಯಪುರ: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಬಿಟ್ಟು, ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿರುವುದನ್ನು ಗಮನಿಸಿದರೆ, ಸರ್ಕಾರ ಕೆಡವಲು ತಂತ್ರ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಾರಂಭಿಸಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುರುವಾರ ಇಲ್ಲಿ ತಿಳಿಸಿದರು.

‘ಜವಾಬ್ದಾರಿ ಸ್ಥಾನದಲ್ಲಿರುವ ಚುನಾಯಿತ ಜನಪ್ರತಿನಿಧಿಯೇ ಮತ ಚಲಾಯಿಸಲು ಗೈರಾದರೇ, ಜನ ಸಾಮಾನ್ಯರು ಇವರಿಗ್ಯಾಕೆ ಮತ ಹಾಕಬೇಕು’ ಎಂದು ಬಸನಗೌಡ ಪ್ರಶ್ನಿಸಿದರು.

‘ಮತ ಚಲಾಯಿಸಲಿಕ್ಕಾಗಿಯೇ ದೂರದ ಊರುಗಳಲ್ಲಿ ಇದ್ದವರು ಬರ್ತಾರೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದವರು ಗಾಲಿ ಖುರ್ಚಿಯಲ್ಲಿ ಬರ್ತಾರೆ. ತಾಳಿ ಕಟ್ಟಿಸಿಕೊಂಡ ಬಳಿಕ ಮತಗಟ್ಟೆಗೆ ಬಂದು ಮತ ಚಲಾಯಿಸಿದವರು ನಮ್ಮ ನಡುವೆಯೇ ಇದ್ದಾರೆ. ಚುನಾವಣೆ ದಿನ ನಿಗದಿಯಾಗಿದ್ದರೂ ವಿದೇಶ ಪ್ರವಾಸ ಕೈಗೊಂಡವರಿಗೆ ಏನು ಹೇಳ್ಬೇಕು ಎಂಬುದೇ ತಿಳಿಯದಾಗಿದೆ. ಇದನ್ನು ಗಮನಿಸಿದರೆ ಸರ್ಕಾರ ಕೆಡುವುವ ಕಸರತ್ತು ಆರಂಭಗೊಂಡಿದೆ ಎಂದೆನಿಸುತ್ತಿದೆ’ ಎಂದು ಯತ್ನಾಳ ತಿಳಿಸಿದರು.

‘ಎಂ.ಬಿ.ಪಾಟೀಲ ಖುಷಿ ಪಡಿಸಲಿಕ್ಕಾಗಿ ನಾನು ರಾಜಕಾರಣ ಮಾಡ್ತಿಲ್ಲ. ಅವರು ಕಷ್ಟ ಕಾಲದಲ್ಲಿ, ಒಬ್ಬಂಟಿಯಾಗಿದ್ದ ಸಂದರ್ಭ ಬಹಿರಂಗ ಬೆಂಬಲ ನೀಡಿದ್ದೆ. ನನಗೆ ಸಚಿವನಾಗುವ ಆಸೆಯಿಲ್ಲ. ಎಂ.ಬಿ.ಪಾಟೀಲ ಬಿಜೆಪಿಗೆ ಬಂದರೇ ಅವರನ್ನೇ ಸಚಿವರನ್ನಾಗಿ ಮಾಡಲು ಯತ್ನಿಸುವೆ’ ಎಂದು ಇದೇ ಸಂದರ್ಭ ಯತ್ನಾಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !