ಹಿರೀಸಾವೆ: ಮನೆಯ ಬಾಗಿಲು ಬೀಗ ಮುರಿದು 100 ಗ್ರಾಂ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವ ಘಟನೆ ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಎಸ್. ರಾಧ ತಮ್ಮ ಮಗ ಪ್ರವೀಣ್ನೊಂದಿಗೆ ಬೆಳಿಗ್ಗೆ 10.30ರ ಸಮಯದಲ್ಲಿ ಮನೆಗೆ ಬೀಗ ಹಾಕಿ, ಹಿರೀಸಾವೆ ಆಸ್ಪತ್ರೆಗೆ ಬಂದಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮನೆಗೆ ಹೋದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಳ್ಳರು ಬಾಗಿಲು ಬೀಗ ಮುರಿದು ಒಳಗೆ ಹೋಗಿ, ಕೋಣೆಯಲ್ಲಿ ಇದ್ದ ಬೀರುವಿನ ಬಾಗಿಲನ್ನು ಮೀಟಿ, ಅದರಲ್ಲಿ ಇಟ್ಟಿದ್ದ ಚಿನ್ನದ ಎರಡು ಸರ, ಎರಡು ಉಂಗುರ, ಒಂದು ಜೊತೆ ಓಲೆ, ಎರಡು ಬಳೆಗಳು ಸೇರಿದಂತೆ 100 ಗ್ರಾಂನಷ್ಟು ಒಡವೆಗಳನ್ನು ಮತ್ತು ₹ 4 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದರೆ. ಕಳ್ಳತನ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಹಿರಿಯ ಪೊಲೀಸ್ ಆಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನದಲ್ಲಿ ಕಳವು: ಹೋಬಳಿಯ ಬೂಕನ ಬೆಟ್ಟದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ದೇವಾಲಯದ ಬಾಗಿಲು ಬೀಗ ಒಡೆದು, ಎರಡು ಹುಂಡಿಯಲ್ಲಿ ಇದ್ದ ಹಣವನ್ನು ಕದ್ದುಕೊಂಡು ಹೋಗಿದ್ದಾರೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳನ್ನು ತಿರುಚಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ಗ್ರೇಡ್ ಬಿ ದೇವಸ್ಥಾನವಾಗಿದ್ದು, ಕಳ್ಳತನದ ವಿಷಯ ತಿಳಿದು, ಕಂದಾಯ ಇಲಾಖೆಯ ಆರ್ಐ ಯೋಗೇಶ್, ಗ್ರಾಮ ಲೆಕ್ಕಾಧಿಕಾರಿ ಶೈಲಜಾ ಮತ್ತು ಪೊಲೀಸರು ಸೇರಿದಂತೆ ಇತರೆ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಹಿರೀಸಾವೆ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.