ಸೋಮವಾರ, ಜೂನ್ 21, 2021
29 °C

ಹಾಸನ: ಚಿಕಿತ್ಸೆಗೆ ಸ್ಪಂದಿಸದೆ 18 ಮಂದಿ ಕೋವಿಡ್ ರೋಗಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಗರಿಷ್ಠ ಕೋವಿಡ್‌ ಸಾವಿನ ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆಗೆ ಸ್ಪಂದಿಸದೆ 18 ಮಂದಿ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 39,192ಕ್ಕೆ ಏರಿಕೆಯಾಗಿದ್ದು, 32,246 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 6,365 ಸಕ್ರಿಯ ಪ್ರಕರಣಗಳ ಪೈಕಿ 67 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ಕಾಯಿಲೆಗೆ ಈವರೆಗೆ 581 ಮಂದಿ ಅಸುನೀಗಿದ್ದಾರೆ. ಹಾಸನ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೋಗಿಗಳು ಸೋಂಕಿನಿಂದ ಮೃತಪಟ್ಟಿದ್ದಾರೆ.‌ ಮೃತಪಟ್ಟ 18 ಮಂದಿ ಪೈಕಿ ನಾಲ್ವರು ಹೊರ ಜಿಲ್ಲೆಯವರು.

ಹೊಸದಾಗಿ ಆಲೂರು ತಾಲ್ಲೂಕು 28, ಅರಕಲಗೂಡು 50, ಅರಸೀಕೆರೆ 143, ಬೇಲೂರು 63, ಚನ್ನರಾಯಪಟ್ಟಣ 195, ಹಾಸನ 120, ಹೊಳೆನರಸೀಪುರ 39, ಸಕಲೇಶಪುರ 27, ಇತರೆ ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು