ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದ 245 ಗ್ರಾ.ಪಂ: 3,352 ಸ್ಥಾನಕ್ಕೆ ಚುನಾವಣೆ

ಎರಡು ಹಂತದಲ್ಲಿ ಚುನಾವಣೆ; ವೇಳಾಪಟ್ಟಿ ಪ್ರಕಟ– ಡಿ.31ರ ವರೆಗೆ ನೀತಿಸಂಹಿತೆ ಜಾರಿ
Last Updated 1 ಡಿಸೆಂಬರ್ 2020, 3:52 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ 267 ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಗಿಯದ 12 ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಗೊಂಡ 10 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಉಳಿದ 245 ಗ್ರಾಮ ಪಂಚಾಯಿತಿಗಳ ಒಟ್ಟು 3,352 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದ್ದಾರೆ.

ಮೊದಲ ಹಂತದ ಚುನಾವಣೆ ಡಿ. 22 ರಂದು ಹಾಸನ, ಅರಕಲಗೂಡು, ಚನ್ನರಾಯಪಟ್ಟಣ ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ನಡೆದರೆ. ಎರಡನೇ ಹಂತದ ಚುನಾವಣೆ ಡಿ. 27ರಂದು ಅರಸೀಕೆರೆ, ಬೇಲೂರು, ಆಲೂರು ಹಾಗೂ ಹೊಳೆನರಸೀಪುರ ತಾಲ್ಲೂಕುಗಳಲ್ಲಿ ನಡೆಯಲಿದೆ.

ನಾಮಪತ್ರಗಳನ್ನು ಸಲ್ಲಿಸಲು ಮೊದಲನೆ ಹಂತಕ್ಕೆ ಡಿ.7 ಹಾಗೂ ಎರಡನೇ ಹಂತಕ್ಕೆ ಡಿ. 11 ಕೊನೆಯ ದಿನವಾಗಿದೆ.

ನಾಮಪತ್ರ ಪರಿಶೀಲನೆ ಮೊದಲನೆ ಹಂತ (ಡಿ.12), ಎರಡನೇ ಹಂತಕ್ಕೆ ಡಿ. 17 ರಂದು ನಡೆಯಲಿದೆ.

ಉಮೇದುವಾರಿಕೆ ಹಿಂಪಡೆಯಲು ಮೊದಲನೆ ಹಂತಕ್ಕೆ ಡಿ. 14 ಹಾಗೂ ಎರಡನೇ ಹಂತಕ್ಕೆ ಡಿ. 19 ಕೊನೆಯ ದಿನವಾಗಿದೆ.

ಮತಗಳ ಎಣಿಕೆ ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ
ನಡೆಯಲಿದೆ.

‘ಚುನಾವಣಾ ನೀತಿ ಸಂಹಿತೆ ನ. 30ರಿಂದ ಡಿ. 31ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ಜಿಲ್ಲೆಯಲ್ಲಿ ಒಟ್ಟು 10,70,545 ಮತದಾರರು ಇದ್ದಾರೆ. ಕೋವಿಡ್ ಕಾರಣದಿಂದ ರಾಜ್ಯ ಚುನಾವಣಾ ಆಯೋಗವು ಮಾರ್ಗಸೂಚಿ ತಯಾರಿಸಿದೆ. ಆಯೋಗದ ಸೂಚನೆ ಪಾಲಿಸಿ ಚುನಾವಣೆ ನಡೆಸಲಾಗುವುದು. ಮತದಾರರರು ಯಾವುದೇ ಆತಂಕವಿಲ್ಲದೆ ತಮ್ಮ ಮತ ಚಲಾಯಿಸಬಹುದು’ ಎಂದು ಜಿಲ್ಲಾಧಿಕಾರಿಗಳು
ತಿಳಿಸಿದ್ದಾರೆ.

‘ಜಿಲ್ಲೆಯ 2,003 ಮತಗಟ್ಟೆಗಳಿಗೆ ಸುಮಾರು 8,850 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗುವುದು. ಚುನಾವಣೆಗಾಗಿ ಅಂಗವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇವೆಯನ್ನು ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಗೊಂಡ ಪಂಚಾಯಿತಿಗಳ ವಿವರ: ಹಾಸನ ತಾಲ್ಲೂಕಿನ ಬಿ. ಕಾಟೀಹಳ್ಳಿ, ಬೂವನಹಳ್ಳಿ, ಹರಳಹಳ್ಳಿ, ಕಂದಲಿ, ಹಂದಿನಕೆರೆ, ಮಣಚನಹಳ್ಳಿ, ಸತ್ಯಮಂಗಲ, ತಟ್ಟೇಕೆರೆ, ತೇಜೂರು, ಹೂವಿನಹಳ್ಳಿ ಕಾವಲು, ದೊಡ್ಡಗೇಣಿಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT