ವಸತಿರಹಿತರಿಗೆ 486 ಮನೆ ಮಂಜೂರು

7

ವಸತಿರಹಿತರಿಗೆ 486 ಮನೆ ಮಂಜೂರು

Published:
Updated:
Deccan Herald

ಅರಕಲಗೂಡು: ‘ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣ ಪ್ರದೇಶದ ವಸತಿ ರಹಿತರಿಗಾಗಿ 486 ಮನೆಗಳು ಮಂಜೂರಾಗಿದೆ’ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿವೇಶನವಿದ್ದು, ಮನೆ ಇಲ್ಲದವರಿಗೆ, ಶಿಥಿಲ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗೆ 18*17 ಅಳತೆಯಲ್ಲಿ ₹ 4.83 ಲಕ್ಷ ವೆಚ್ಚದಲ್ಲಿ ಮಂಡಳಿ ಮನೆಯನ್ನು ನಿರ್ಮಿಸಿಕೊಡಲಿದೆ ಎಂದು ಹೇಳಿದರು.

‘ಇದಕ್ಕಾಗಿ ಪರಿಶಿಷ್ಟ ವರ್ಗದವರು ₹ 48 ಸಾವಿರ ಹಾಗೂ ಇತರರು ₹ 72ಸಾವಿರ ಅನ್ನು ಮುಂಗಡ  ಪಾವತಿಸಬೇಕು. ಫಲಾನುಭವಿ ಹೆಸರಿನಲ್ಲಿ ಕನಿಷ್ಠ 20*20 ಅಳತೆಯ ನಿವೇಶನ ಇರುವುದು ಅಗತ್ಯವಾಗಿದೆ’ ಎಂದು ವಿವರಿಸಿದರು.

ಪಟ್ಟಣದಲ್ಲಿ 18 ಕೊಳಗೇರಿಗಳ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಪಟ್ಟಣದ ಕೆಲ್ಲೂರು, ಜೈಭೀಮ್ ನಗರ ಹಾಗೂ ಎ.ಡಿ.ಕಾಲೋನಿಗಳಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.  ಇಲ್ಲಿ ನಿರೀಕ್ಷಿತ ಸಂಖ್ಯೆಯ ಫಲಾನುಭವಿಗಳು ಇರದಿದ್ದರೆ   ಬೇರೆ ಕೊಳೆಗೇರಿಗಳಿಗೆ ವಿಸ್ತರಿಸಲಾಗುವುದು ಎಂದರು ಹೇಳಿದರು.

ಕೆಲ್ಲೂರು ಗ್ರಾಮದಲ್ಲಿ 32 ಮಂದಿ ಹಾಗೂ ಎ.ಡಿ.ಕಾಲೋನಿ ಗ್ರಾಮದಲ್ಲಿ 76 ಮಂದಿ ಮನೆ ಕೋರಿ ಹೆಸರು ನೋಂದಣಿ ಮಾಡಿಸಿದ್ದಾರೆ. ಜೈಭೀಮ್ ನಗರದಲ್ಲಿ ನಿವೇಶನ ಹೊಂದಿರುವ ವಸತಿರಹಿತರಿದ್ರೂ ನಿವೇಶನಗಳ ಖಾತೆ ಬದಲಾಗಿಲ್ಲ. ಶೀಘ್ರ ಖಾತೆ ಬದಲಾವಣೆ ಮಾಡಿಕೊಡಲು ಪ.ಪಂ ಮುಖ್ಯಾಧಿಕಾರಿಗೆ ಸೂಚಿಸಲಾಗುವುದು  ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಸಿ.ಲೋಕೇಶ್, ಸದಸ್ಯ ಎ.ಸಿ.ಮಂಜುನಾಥ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಅತ್ನಿ ಹರೀಶ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಎಂಜಿನಿಯರ್ ಕೆ.ಆರ್.ಕವಿತಾ, ಮಂಡಳಿ ಎಇಇ ರಾಮಚಂದ್ರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !