ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸುಳ್ಳು ದೂರು ನೀಡಿದರೆ ಕ್ರಮ

ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಎಸ್ಪಿ ಎಚ್ಚರಿಕೆ
Last Updated 6 ಅಕ್ಟೋಬರ್ 2020, 12:45 IST
ಅಕ್ಷರ ಗಾತ್ರ

ಹಾಸನ: ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದೌರ್ಜನ್ಯ ಕುರಿತು ಮತ್ತಷ್ಟು ದೂರುಗಳು ಕೇಳಿ ಬಂದಿದ್ದು,ಎಲ್ಲಾ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಪೊಲೀಸ್‌ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಹೇಳಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾಖಲಿಸಿಕೊಂಡ ಬಳಿಕ ಹಂತ ಹಂತವಾಗಿ ತನಿಖೆ ನಡೆಸಲಾಗುತ್ತದೆ. ನಂತರ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸುಳ್ಳು ದೂರು ನೀಡಿದವರ ವಿರುದ್ಧವೂ ಕ್ರಮ ಜರುಗಿಸಲಾಗುವುದುಎಂದು ಎಚ್ಚರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಮಾತನಾಡಿ, ಹಿಂದಿನ ಕುಂದು ಕೊರತೆ ಸಭೆಯ ನಂತರಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 370 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.ಹಿಂದಿನ ಸಭೆಯಲ್ಲಿ ಕೇಳಿ ಬಂದ ದೂರುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗಿದೆ. ಠಾಣಾ ಬರಹಾಗಾರರಿಗೆ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕುರಿತು ಸಭೆ
ಮಾಡಲಾಗಿದೆ ಎಂದು ಹೇಳಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್‌ಪಿಐ ಸತೀಶ್‌ ಮಾತನಾಡಿ, ‘ಮಹಾನಾಯಕ’ ಧಾರಾವಾಹಿ ‌
ಪ್ರಚಾರದ ಫ್ಲೆಕ್ಸ್‌ ಅಳವಡಿಸಲಾಗಿದೆ. ಆದರೆ, ಜಿಲ್ಲಾಡಳಿತ ಫ್ಲೆಕ್ಸ್‌ ಅಳವಡಿಕೆಗೆ ನಿರ್ಬಂಧ ವಿಧಿಸಿ ಆದೇಶ
ಹೊರಡಿಸಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, 24 ಗಂಟೆ ಕಾವಲು ಕಾಯುವುದು ಸಾಧ್ಯವಿಲ್ಲ. ಪ್ಲಾಸ್ಟಿಕ್‌ ಫ್ಲೆಕ್ಸ್‌
ಅಳವಡಿಸಬಾರದು ಎಂಬ ನಿಯಮ ಸಡಿಲ ಮಾಡಬೇಕು ಎಂದು ಮನವಿ ಮಾಡಿದರು.

ಮುಖಂಡ ಜಗದೀಶ್‌ ಮಾತನಾಡಿ, ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದರೆ ಸರಿಯಾಗಿ
ಸ್ಪಂದಿಸುತ್ತಿಲ್ಲ. ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಕೆಲವತ್ತಿ ಸೋಮಶೇಖರ‍್ ಮಾತನಾಡಿ, ಸಾಲಗಾಮೆ ಹೋಬಳಿ ಐದಳ್ಳ ಸುತ್ತಮುತ್ತ ಅತ್ಯಂತ ಬಡ
ವರ್ಗದವರು ವಾಸವಾಗಿದ್ದಾರೆ. ಅಲ್ಲಿ ಯಾವುದೇ ಅಪರಾಧ ಕೃತ್ಯಗಳು ನಡೆದರೂ ದೂರು ನೀಡಲುಹಾಸನಕ್ಕೆಬರಬೇಕಿದೆ. ಅನೇಕರಿಗೆ ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗಿದೆ. ಆದ್ದರಿಂದ ಐದಳ್ಳ ಕಾವಲ್ಹೊರವಲಯದಲ್ಲಿ ಪೊಲೀಸ್‌ ಠಾಣೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಮಾದಿಗ ದಂಡೋರ ಸಂಚಾಲಕ ವಿಜಯ್‌ಕುಮಾರ್‌ ಮಾತನಾಡಿ, ಗೊರೂರು ಪೊಲೀಸ್‌ ಠಾಣೆಯ
ಇನ್‌ಸ್ಪೆಕ್ಟ್‌ರ್‌ ಸಾಗರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಕೆಲವು ಕಾನ್‌ಸ್ಟೆಬಲ್‌ಗಳು ಅಲ್ಲಿಯೇ
ಇದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆ ಆರಂಭದಲ್ಲಿ ಕಳೆದ ಕುಂದು ಕೊರತೆ ಸಭೆಯ ದೂರುಗಳನ್ನು ಆಧರಿಸಿ ಪೊಲೀಸ್‌ ಇಲಾಖೆ ಕೈಗೊಂಡಿರುವಕ್ರಮದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಡಿವೈಎಸ್ಪಿಗಳಾದ ಲಕ್ಷ್ಮಣ್‌ಗೌಡ, ಗೋಪಿ, ಪುಟ್ಟಸ್ವಾಮಿಗೌಡ, ದಲಿತ ಸಂಘರ್ಷ ಸಮಿತಿ ಮುಖಂಡರಾದ
ಎಚ್.ಕೆ. ಸಂದೇಶ್‌, ಕೆ. ಈರಪ್ಪ, ಛಲವಾದಿ ಪುಟ್ಟರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT