ಅರಕಲಗೂಡು: ಪಟ್ಟಣದ ಎಲ್ಲ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಗಿಡಗಳನ್ನು ನೆಟ್ಟು ಬೆಳೆಸಲು ಕ್ರಮ ಕೈಗೊಳ್ಳುವುದಾಗಿ ಪ.ಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ತಿಳಿಸಿದರು.

ಪರಿಸರ ದಿನಾಚರಣೆ ಪ್ರಯುಕ್ತ ಗುರುವಾರ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಉದ್ಯಾನದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಪಾರ್ಕ್ಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿದ್ದು, ಟೆಂಡರ್ ಕರೆದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ನೆಟ್ಟಿದ್ದ ಗಿಡಗಳ ಸಂರಕ್ಷಣೆಗೆ ಗಮನ ಹರಿಸಲಾಗಿದೆ. ಪಟ್ಟಣ ವ್ಯಾಪ್ತಿಯ ರಸ್ತೆ ವಿಭಜಕಗಳಲ್ಲಿ ನೆಟ್ಟಿದ್ದ ಗಿಡಗಳ ರಕ್ಷಣೆಯನ್ನು ಪ.ಪಂ ನಡೆಸಲಿದೆ. ಸಾರ್ವಜನಿಕರೂ ಸಹ ಈ ಕಾರ್ಯದಲ್ಲಿ ಕೈಜೋಡಿಸಬೇಕು. ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು. ಸದಸ್ಯರಾದ ಕೃಷ್ಣಯ್ಯ, ಅಬ್ದುಲ್ ಬಾಸಿದ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ ಮತ್ತು ಪ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಡು ಬೆಳೆಸುವಂತೆ ಸಲಹೆ: ಕಾಡು ಬೆಳೆಸಿ ನಾಡು ಉಳಿಸುವ ಸಂಕಲ್ಪವನ್ನು ಯುವಜನತೆ ಮಾಡದಿದ್ದರೆ ಮುಂದಿನ ಪೀಳಿಗೆ ಅನಾರೋಗ್ಯ ಪೀಡಿತ ಸಮಾಜದಲ್ಲಿ ಜೀವಿಸಬೇಕಾಗುತ್ತದೆ ಎಂದು ಎಸ್ಬಿಐ ಶಾಖಾ ವ್ಯವಸ್ಥಾಪಕ ಅನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಗತಿ ಹೊಂದಿದ ಹಾಗೂ ಪ್ರಗತಿಶೀಲ ದೇಶಗಳು ಜಾಗತಿಕವಾಗಿ ಪ್ರಬಲ ಆರ್ಥಿಕ ಹಾಗೂ ಸೈನಿಕ ಶಕ್ತಿಯಾಗಿ ಬೆಳೆಯುವ ಸ್ಪರ್ಧೆಯಲ್ಲಿ ಮಗ್ನರಾಗಿದ್ದು ಇದರಿಂದ ಉಂಟಾಗುತ್ತಿರುವ ಪರಿಸರಸದ ಹಾನಿ ಕುರಿತು ಗಮನ ಹರಿಸದಿರುವುದು ವಿಶ್ವದಾದ್ಯಂತ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ನಾಗರಿಕರಾದ ನಾವು ಎಚ್ಚೆತ್ತು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ದೊಡ್ಡ ಅನಾಹುತ ತಲೆದೋರಲಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನರಸೇಗೌಡ, ಪರಿಸರದ ಅಸಮತೋಲನವನ್ನು ಸರಿದೂಗಿಸಲು ಕಾಡುಗಳ ನಾಶ ತಪ್ಪಿಸಿ ಅವುಗಳನ್ನು ಉಳಿಸಿ ಬೆಳೆಸುವುದೊಂದೆ ಮಾರ್ಗ. ಪ್ರತಿಯೊಬ್ಬರೂ ಗಿಡಗಳನ್ನು ನೆಡುವ ಮೂಲಕ ಕಾಡು ಬೆಳೆಸಿದರೆ ನಾಡು ಸಮೃದ್ಧಿಯಾಗಿರುತ್ತದೆ. ಯುವ ಪೀಳಿಗೆ ಜಾಗೃತರಾಗದಿದ್ದರೆ ಪ್ರಪಂಚದ ಅಸ್ತಿತ್ವ ಬುಡಮೇಲಾಗುತ್ತದೆ. ಕೇವಲ ಕಾರ್ಯಕ್ರಮಗಳಲ್ಲಿ ಪರಿಸರದ ಬಗ್ಗೆ ಮಾತನಾಡಿ ಗಿಡಗಳನ್ನ ವಿತರಿಸಿದರೆ ಸಾಲದು, ಅವುಗಳ ಪೋಷಣೆ ಮುಖ್ಯ ಎಂದರು.

ಪ್ರಾಂಶುಪಾಲರಾದ ಗಾಯಿತ್ರಿ ಕಾಲೇಜು ಅವರಣಾದಲ್ಲಿರುವ ಗಿಡಗಳನ್ನು ಪ್ರತಿ ವಿದ್ಯಾರ್ಥಿಗೆ ದತ್ತು ನೀಡುವ ಮೂಲಕ ಗಿಡಗಳ ರಕ್ಷಣೆ ಮಾಡುವುದಾಗಿ ಹೇಳಿದರು. ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ನಿಂಗೇಗೌಡ, ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿಶ್ವಾಸ್, ಉಪನ್ಯಾಸಕರಾದ ಲಾಡಪ್ಪ, ಉಷಾ, ಹೇಮಾ, ಮಹೇಶ್, ತೇಜಸ್ವಿನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.