ಶನಿವಾರ, ನವೆಂಬರ್ 28, 2020
25 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಕರೆ

ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಪಕ್ಷದ ಜತೆಗೆ ಸದೃಢ ದೇಶವನ್ನು ಕಟ್ಟುವ ಕನಸನ್ನು ಬಿಜೆಪಿ ಕಂಡಿದ್ದು, ಅದರ ಸಾಕಾರಕ್ಕೆ ಪ್ರತಿ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಸಲಹೆ
ನೀಡಿದರು.

ನಗರದ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ನಡೆದ ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ಹಾಗೂ ಹತ್ತು ಅಂಶಗಳ ವಿಷಯ ಚರ್ಚೆ ಸಭೆ ಉದ್ಘಾಟಿಸಿ ಮಾತನಾಡಿದರು.

‘ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಈ ತತ್ವ ನಿಷ್ಠೆಯೇ ದೇಶದಾದ್ಯಂತ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ. ಪ್ರತಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

‘2014ರ ಲೋಕಸಭೆ ಚುನಾವಣೆಗೆ ಮೊದಲು ದೇಶದಲ್ಲಿ ಬಿಜೆಪಿ ಸ್ಥಿತಿ ಹೇಗಿತ್ತು ಹಾಗೂ ಈಗ ಯಾವ ಸ್ಥಾನದಲ್ಲಿದ್ದೇವೆ ಎಂಬುದರ ವಿಮರ್ಶೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗುವತ್ತ ದಾಪುಗಾಲಿಡುತ್ತಿದೆ’ ಎಂದು ಹೇಳಿದರು.

ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಮಾತನಾಡಿ, ‘ಪ್ರಶಿಕ್ಷಣ ವರ್ಗವು ಎಲ್ಲ ಕಾರ್ಯಕರ್ತರು ಒಂದೆಡೆ ಸೇರುವ ಸುಸಂದರ್ಭವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿದ್ದು, ಯಾವುದೇ ಕ್ಷೇತ್ರದ ಚುನಾವಣೆ ನಡೆದರೂ ಹಾಸನದ ಕಾರ್ಯಕರ್ತರು ಅಲ್ಲಿರುತ್ತಾರೆ’ ಎಂದರು.

ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ಮೈಸೂರು ವಿಭಾಗ ಮುಖಂಡ ಕುಮಾರಸ್ವಾಮಿ, ಪದ್ಮನಾಭ ಹಾಗೂ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.