ಯಥಾಸ್ಥಿತಿಗೆ ಮರಳುತ್ತಿರುವ ಆಲೂರು

ಆಲೂರು: ಲಾಕ್ಡೌನ್ ಸಡಿಲಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಜಂಗುಳಿ, ವಾಹನಗಳ ಸಂಚಾರ ಮಾಮೂಲಿಗೆ ಬರುತ್ತಿದೆ.
ವರ್ಕ್ಶಾಪ್, ಬಟ್ಟೆ, ದಿನಸಿ, ಮದ್ಯದಂಗಡಿ ತೆರೆದಿದ್ದವು. ಕೋಳಿ, ಮಾಂಸ ಮಾರಾಟ ಕೇಂದ್ರಗಳು ತೆರೆದಿರಲಿಲ್ಲ. ಗುರುವಾರದಿಂದ ವಾರದಲ್ಲಿ ಮೂರು ದಿನ ಮಾತ್ರ ತೆರೆಯಲಿವೆ. ಮದ್ಯದಂಗಡಿಗಳಲ್ಲಿ ದಾಸ್ತಾನು ಇಲ್ಲದ ಕಾರಣ ಬಿಯರ್ ಮಾತ್ರ ಮಾರಾಟ ಮಾಡಲಾಗುತ್ತಿತ್ತು.
ಪ್ರತಿ ಅಂಗಡಿಯಲ್ಲೂ ಗ್ರಾಹಕರು ಅಂತರ ಕಾಯ್ದುಕೊಂಡು ವಹಿವಾಟಿನಲ್ಲಿ ತೊಡಗಿದ್ದರು. ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದರು. ತಾಲ್ಲೂಕು ಕಚೇರಿಯಲ್ಲಿ ಹೊರ ಜಿಲ್ಲೆ, ಬೇರೆ ರಾಜ್ಯದ ಕಾರ್ಮಿಕರನ್ನು ನಿಯಮಾನುವಾರವಾಗಿ ಕಳುಹಿಸಲು ಪ್ರಕ್ರಿಯೆ ನಡೆಯುತ್ತಿದೆ. ಪಟ್ಟಣದಲ್ಲಿ ಸಾರಿಗೆ ಬಸ್ಗಳು ಓಡಾಡಲಿಲ್ಲ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬ್ಯಾಂಕ್ ಸಂಬಂಧಿಸಿದ ಮಾರ್ಟ್ಗೇಜ್, ಖುಲಾಸೆ ಪತ್ರಗಳ ನೋಂದಣಿ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿಗಳಿಗೆ ಜನರು ಆಗಾಗ ಬಂದು ಹೋಗುತ್ತಿದ್ದಾರೆ.
ಮೂರು ದಿನಗಳಿಂದ ಹದ ಮಳೆಯಾಗುತ್ತಿರುವುದರಿಂದ ಬಹುತೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸಮ-ಬೆಸ ದಿನಗಳಂದು ಮಾರುಕಟ್ಟೆ ತೆರೆದಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಲು ಅನುಕೂಲವಾಗಿದೆ ಎಂದು ಸಂತಸಗೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.