ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ಸಂಭ್ರಮದ ಮಹಾಶಿವರಾತ್ರಿ

Published 8 ಮಾರ್ಚ್ 2024, 14:22 IST
Last Updated 8 ಮಾರ್ಚ್ 2024, 14:22 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ಮಹಾ ಶಿವರಾತ್ರಿಯನ್ನು ಜನರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ, ಪಾನಕ ವಿತರಣೆ ನಡೆಯಿತು.

ಕೋಟೆ ಪುರಾಣ ಪ್ರಸಿದ್ಧ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಭಕ್ತರು ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸಂಜೆ ಗಿರಿಜಾ ಕಲ್ಯಾಣೋತ್ಸವ ಹಾಗೂ ರಾತ್ರಿ ನಾಲ್ಕು ಯಾಮಗಳ ರುದ್ರಾಭಿಷೇಕ, ಜಾಗರಣೆ ನಡೆಯಿತು.

ಶಂಭುನಾಥಪುರದ ಐತಿಹಾಸಿಕ ಸ್ವಯಂಭು ನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಪಾರ್ವತಮ್ಮ ಸೇವಾ ಟ್ರಸ್ಟ್ ನಿಂದ ಅಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಶಾಸಕ ಎ. ಮಂಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪೇಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಅಭಿಷೇಕ, ವಿಭೂತಿ ಸಹಸ್ರಾರ್ಚನೆ, ಲಿಂಗಾಷ್ಠಕ, ಮತ್ತು ನಂಜಂಡೇಶ್ವರ ಸ್ವಾಮಿ ಮಹಿಮೆ ಪಠಣೆ ನಡೆಯಿತು. ಸಂಜೆ ಆಧ್ಯಾತ್ಮಿಕ ವಿಷಯಗಳ ಕುರಿತು ರಸಪ್ರಶ್ನೆ, ರಾತ್ರಿ ಕ್ಷೀರಾಭಿಷೇಕ, ಜಾಗರಣೆ ನಡೆಯಿತು.

ಪಟ್ಟಣದ ಶಕ್ತಿಗಣಪತಿ ದೇವಾಲಯ, ಶನೇಶ್ವರ ಸ್ವಾಮಿ ದೇವಾಲಯ, ವೀರಭದ್ರೇಶ್ವರ ಸ್ವಾಮಿ ದೇವಾಲಯ, ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ , ಸಾಮೂಹಿಕ ಭಜನೆ, ಜಾಗರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಿವಶಕ್ತಿ ನಮನ: ಪಟ್ಟಣದ ಕಲಾಮೃತ ಶಿವಶಕ್ತಿ ಯೋಗ ಶಿಕ್ಷಣ ಸಂಸ್ಥೆ ಸದಸ್ಯರು ಯೋಗ ಶಿಕ್ಷಕರಾದ ಬಿ.ಎಂ.ಭಾರತಿ ಹಾಗೂ ಕುಮಾರ್ ನೇತೃತ್ವದಲ್ಲಿ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಶಿವಶಕ್ತಿ ನಮನ ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು.

ಶಿವದರ್ಶನ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಪಟ್ಟಣದ ಕೊತ್ತಲಗಣಪತಿ ದೇವಾಲಯದ ಆವರಣದಲ್ಲಿ ಶಿವದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬದುಕಿನ ಒತ್ತಡವನ್ನು ನೀಗಿಸಲು ನೆರವಾಗುವಂತೆ ಆಧ್ಯಾತ್ಮಿಕ ಚಿಂತನೆ ಕುರಿತು ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಚಾಲಕಿ ಬಿ. ಕೆ. ಸುಶ್ಮಾ, ಪ.ಪಂ ಸದಸ್ಯ ರಮೇಶ್ ವಾಟಾಳ್ ಪಾಲ್ಗೊಂಡಿದ್ದರು.

ಅರಕಲಗೂಡು ಸಮೀಪದ ಶಂಭುನಾಥಪುರದ ಶಂಭುನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಎ. ಮಂಜು ಭಕ್ತರೊಂದಿಗೆ ಪ್ರಸಾದ ಸವಿದರು. ಪಾರ್ವತಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ ಇದ್ದರು
ಅರಕಲಗೂಡು ಸಮೀಪದ ಶಂಭುನಾಥಪುರದ ಶಂಭುನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಎ. ಮಂಜು ಭಕ್ತರೊಂದಿಗೆ ಪ್ರಸಾದ ಸವಿದರು. ಪಾರ್ವತಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ ಇದ್ದರು
ಅರಕಲಗೂಡಿನಲ್ಲಿ ಶುಕ್ರವಾರ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯವು ಮಹಾಶಿವರಾತ್ರಿ ಪ್ರಯುಕ್ತ ಕೊತ್ತಲು ಗಣಪತಿ ದೇವಾಲಯದಲ್ಲಿ ಶಿವದರ್ಶನ ಕಾರ್ಯಕ್ರಮ ಏರ್ಪಡಿಸಿತ್ತು

ಅರಕಲಗೂಡು ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೆವರಿಗೆ ಬೆಳ್ಳಿ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗಿತ್ತು
ಅರಕಲಗೂಡು ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೆವರಿಗೆ ಬೆಳ್ಳಿ ಆಭರಣಗಳನ್ನು ತೊಡಿಸಿ ಅಲಂಕರಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT