ಬೇಲೂರು: ತಾಲ್ಲೂಕಿನ 8 ಸ್ಥಳಗಳಲ್ಲಿ ಹಿಂದೂ ಸಮಾಜೋತ್ಸವವನ್ನು ಪಕ್ಷಾತೀತವಾಗಿ ಆಯೋಜಿಸಲಾಗಿದೆ ಎಂದು, ಹಿಂದೂ ಸಮಾಜೋತ್ಸವವ ಆಚರಣಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ತಿಳಿಸಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಆಚರಣೆ ಅಂಗವಾಗಿ ಸಾಮಾಜಿಕ ಪರಿವರ್ತನೆ, ಧಾರ್ಮಿಕ ಪ್ರಜ್ಞೆ ಬಲಗೊಳಿಸಲು ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಉತ್ಸವದಂದು ವಿವಿಧ ಕಲಾತಂಡಗಳೊಂದಿಗೆ ಶೋಭಾಯಾತ್ರೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜ. 19ರಂದು ಅರೇಹಳ್ಳಿ, 24ರಂದು ಗೆಂಡೇಹಳ್ಳಿ, 27ರಂದು ಬೇಲೂರು, ಫೆ. 1ರಂದು ನಾಗೇನಹಳ್ಳಿಯಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಬಿಕ್ಕೋಡು, ನಾರ್ವೆ, ಹಳೇಬೀಡು, ಹಗರೆಗೆ ದಿನಾಂಕ ನಿಗದಿಪಡಿಸಬೇಕಿದೆ’ ಎಂದರು.

‘ಹಿಂದೂ ಸಮಾಜ ವಿಭಜನೆಯಾಗಿ ಏಕತೆ ಕುಂಠಿತವಾಗುತ್ತಿದ್ದು, ಇದನ್ನು ಮನಗಂಡು ಸಮಾಜವನ್ನು ಮತ್ತೆ ಒಂದುಗೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಜಾತಿಯವರನ್ನು ಒಂದೇ ವೇದಿಕೆಗೆ ತರುವುದು ಮತ್ತು ಜಾತಿಯತೆಯನ್ನು ಹೋಗಲಾಡಿಸುವುದು ಇದರ ಉದ್ದೇಶವಾಗಿದೆ’ ಎಂದರು.

ಹಿಂದೂ ಸಮಾಜೋತ್ಸವವ ಆಚರಣಾ ಸಮಿತಿ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಜಿ.ಕೆ.ಕುಮಾರ್, ಮೋಹನ್, ರಮೇಶ್, ರೇಖಾ ಬಸವರಾಜು ಹಾಗೂ ನಗರಾಧ್ಯಕ್ಷ ಭರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.