ಹಲವೆಡೆ ಬಿರುಸಿನ ಮಳೆ: ಕೃಷಿ ಜಮೀನು ಜಲಾವೃತ
20 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಾಶ
ಹಾಸನ: ಜಿಲ್ಲೆಯ ವಿವಿಧೆಡೆ ಬುಧವಾರವೂ ಉತ್ತಮ ಮಳೆಯಾಗಿದೆ. ನಗರದಲ್ಲಿ ತುಂತರು ಮಳೆಯಾದರೆ, ಅರಸೀಕೆರೆ, ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಅರಕಲಗೂಡು ಭಾಗದಲ್ಲಿ ಸುಮಾರು ಅರ್ಧ ತಾಸು ರಭಸದ ಮಳೆ ಸುರಿದಿದೆ.
ನಿರಂತರ ಮಳೆಯಿಂದಾಗಿ ತೋಟ, ಗದ್ದೆ ಹಾಗೂ ಕೃಷಿ ಜಮೀನು ಜಲಾವೃತಗೊಂಡಿವೆ. ಕಟಾವು ಹಂತದಲ್ಲಿರುವ ಹಾಗೂ ಕಟಾವು ಮಾಡಿರುವ ರಾಗಿ ಬೆಳೆ ನಾಶವಾಗಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಅರಸೀಕೆರೆ ತಾಲ್ಲೂಕಿನಲ್ಲಿ 9248 ಹೆಕ್ಟೇರ್, ಚನ್ನರಾಯಪಟ್ಟಣ 9850 ಹೆಕ್ಟೇರ್ ಹಾಗೂ ಹಾಸನ ತಾಲ್ಲೂಕಿನಲ್ಲಿ 248 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ನಾಶವಾಗಿದೆ. ಬೇಲೂರು ತಾಲ್ಲೂಕಿನಲ್ಲಿ 500 ಹೆಕ್ಟೇರ್, ಹಾಸನ ತಾಲ್ಲೂಕಿನಲ್ಲಿ 97 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾಳಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.