ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಬೆಂಬಲಿಸಿ ಮೈತ್ರಿ ಅಭ್ಯರ್ಥಿ ಸೋಲಿಸಿ: ಶ್ರೀಧರ ಕಲಿವೀರ

Published 17 ಏಪ್ರಿಲ್ 2024, 17:09 IST
Last Updated 17 ಏಪ್ರಿಲ್ 2024, 17:09 IST
ಅಕ್ಷರ ಗಾತ್ರ

ಆಲೂರು: ‘ ಎನ್‌ಡಿಎ 400  ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿ ಸಂವಿಧಾನವನ್ನು ಬದಲಾಯಿಸುವ ಗುಪ್ತಗುರಿಯನ್ನು ಹೊಂದಿರುವುದರಿಂದ ಮತದಾರರು ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಶ್ರೀಧರಕಲಿವೀರ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಮಾನತೆ, ಬಹುತ್ವ, ಒಕ್ಕೂಟ, ಸಂವಿಧಾನದ ಸಂಪೂರ್ಣ ಅಷ್ಠಾನಕ್ಕಾಗಿ ನಿರ್ಧರಿಸಿರುವ ಕಾಂಗ್ರೆಸ್–ಐ.ಎನ್.ಡಿ.ಐ.ಎ. ಗೆಲ್ಲಿಸಿ, ಸಂವಿಧಾನ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ–ಜನತಾದಳ– ಎನ್.ಡಿ.ಎ. ಸೋಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂವಿಧಾನವನ್ನು ಸಂರಕ್ಷಿಸಿ, ಜಾತಿ ಜನಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆ, ಶೋಷಿತ ಬಹುಜನರಿಗೆ ಶೇ 50 ಮೀರಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ,  ಪಂಚನ್ಯಾಯಗಳಾದ ಯುವ ನ್ಯಾಯ, ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯ ಒಳಗೊಂಡ 'ನ್ಯಾಯಪತ್ರ' ಪ್ರಕಟಿಸಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಘೋಷಣೆ ಮಾಡಲಾಗಿದೆ ಎಂದರು.  ಬಿಜೆಪಿ/ ಜೆಡಿಎಸ್/ ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು  ಸೋಲಿಸಬೇಕೆಂದು  ಮನವಿ ಮಾಡಿದರು.

ದಲಿತ ಮುಖಂಡರಾದ ಅಂಬುಗ ಮಲ್ಲೇಶ್, ಸಿದ್ದಪ್ಪ, ಭಾಗ್ಯ ಕಲಿವೀರ, ಗುರುಮೂರ್ತಿ, ಕೆ.ವೈ.ಜಗದೀಶ್, ಪರಮೇಶ ಸಿಂಗಟಗೆರೆ, ದೇವರಾಜು, ರಾಜಶೇಖರ್, ಲೋಕೇಶ್ ಅಂಜೇನಹಳ್ಳಿ, ಲೋಹಿತ್, ಮೇಘಾ, ಸುನೀಲ್ ಕುಮಾರ್ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT