ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲದಲ್ಲಿ ಸರ್ಕಾರಿ ಸೌಲಭ್ಯ ತಲುಪಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಸೂಚನೆ
Last Updated 28 ಜನವರಿ 2022, 16:39 IST
ಅಕ್ಷರ ಗಾತ್ರ

ಹಾಸನ: ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ ಸರ್ಕಾರದಿಂದ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವ ಜತೆಗೆ ಸಾಮಾಜಿಕಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅಧಿಕಾರಿಗಳಿಗೆ ಸೂಚನೆನೀಡಿದರು.

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರಮಾತನಾಡಿ, ಸಮುದಾಯದವರಿಗೆ ವಸತಿ ವ್ಯವಸ್ಥೆ , ನಿವೇಶನಕ್ಕೆ ಸೂಕ್ತ ಜಾಗಗುರುತಿಸಬೇಕು. ಖಾಸಗಿಯವರಿಂದಲೂ ನೇರ ಖರೀದಿ ಮಾಡಿ ಮನೆಗಳನ್ನು
ನಿರ್ಮಿಸಬೇಕು ಎಂದರು.

ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ವಾಲೆಹಳ್ಳಿ ಸರ್ವೆ ನಂ ನಲ್ಲಿ ಅರಣ್ಯ ಇಲಾಖೆಗೆ ಮೀಸಲಿರಿಸಿರುವ ಜಾಗದಲ್ಲೇ ಅಲೆಮಾರಿ, ಅರೆ ಅಲೆ ಸಮುದಾಯದವರಿಗೆನಿವೇಶನಕ್ಕೆ ಜಾಗ ಕಾಯ್ದಿರಿಸಿರುವ ವಿಚಾರ ಇತ್ಯರ್ಥವಾಗದೇ ನ್ಯಾಯಾಲಯದಲ್ಲೇಉಳಿದಿದೆ. ಹಾಗಾಗಿ ಪಕ್ಕದಲ್ಲೇ ಇರುವ ಸರ್ಕಾರಿ ಜಮೀನನ್ನು ಮಂಜೂರುಮಾಡಿಸಿಕೊಂಡು ನಿವೇಶನ ರಚಿಸಿ, ಹಂಚಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚನೆನೀಡಿದರು.

ಗೊಲ್ಲರಹಟ್ಟಿಗಳಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಹೆಣ್ಣು ಮಕ್ಕಳ ಆರೋಗ್ಯದ ಮೇಲೆದುಷ್ಪರಿಣಾಮ ಬೀರುವ ಆಚರಣೆಗಳ ಬಗ್ಗೆ ವೈದ್ಯರ ಮೂಲಕ ಅರಿವು ಮೂಡಿಸಬೇಕುಎಂದು ಗಿರೀಶ್ ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಲಮಾಣಿ ಮತ್ತು ಅರಸೀಕೆರೆ ತಹಶೀಲ್ದಾರ್ ಸಂತೋಷ್‌ ಅವರು ಪ್ರಕರಣದ ಬಗ್ಗೆ ಪೂರಕ ವಿವರಗಳನ್ನು ಸಭೆಗೆ
ಒದಗಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವತಿಯಿಂದ ಅಲೆಮಾರಿ, ಅರೆಅಲೆಮಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿಶೇಷಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ, ಆಶ್ರಮ ಶಾಲೆಗಳ ನಿರ್ವಹಣೆ, ಪ್ರತಿಷ್ಠಿತ ಶಾಲೆಗಳಪ್ರವೇಶಾವಕಾಶ, ಅರಿವು ಮೂಡಿಸುವ ಕಾರ್ಯಕ್ರಮಗಳು, ಮೂಲಭೂತ ಸೌಕರ್ಯ
ಕಾರ್ಯಕ್ರಮಗಳು ಹಾಗೂ ವಸತಿ ಸೌಲಭ್ಯ, ನಿವೇಶನ ಹಂಚಿಕೆಗಾಗಿ ಜಮೀನು ಖರೀದಿ
ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಸಕಾಲದಲ್ಲಿ ಯೋಜನೆಗಳ
ಅನುಷ್ಠಾನ ಪೂರ್ಣಗೊಳಿಸಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT