ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಮ್ಮ, ಚಿಕ್ಕಮ್ಮದೇವಿ ಜಾತ್ರೆ ಸಂಭ್ರಮ

Published 23 ಮೇ 2023, 14:07 IST
Last Updated 23 ಮೇ 2023, 14:07 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ದೊಡ್ಡಮ್ಮ, ಚಿಕ್ಕಮ್ಮ, ಕರಿಮಾರಿಯಮ್ಮ, ಹಾಗೂ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.

ರೇಣುಕಾನಗರದಲ್ಲಿ ತಳಿರು, ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಅಮಾನಿಕೆರೆ ಬಳಿ ಇರುವ ಅರಳಿಕಟ್ಟೆಯಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ದೇವರನ್ನು ಮಂಗಳವಾದ್ಯದೊಂದಿಗೆ ಅಡ್ಡೆ ಉತ್ಸವ ನೆರವೇರಿಸಲಾಯಿತು. ತಮಟೆಯ ನಾದಕ್ಕೆ ಯುವಕರು ಹೆಜ್ಜೆ ಹಾಕಿದರು. ಉತ್ಸವ ಅಗ್ರಹಾರ ಬೀದಿಯ ದೊಡ್ಡಮ್ಮ ದೇವಿ ದೇವಸ್ಥಾನಕ್ಕೆ ತೆರಳಿತು.

ದೇಗುಲದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಪೂಜೆ ನೆರವೇರಿಸಲಾಯಿತು. ಭಕ್ತರು ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು.
ಬಳಿಕ ಮೆರವಣಿಗೆ ಬಿ.ಎಂ. ರಸ್ತೆಯ ಮೂಲಕ ರೇಣುಕಾ ನಗರದ ದೇವಸ್ಥಾನದ ಬಳಿಗೆ ಆಗಮಿಸಿತು. ನಾಲ್ಕು ದೇವರ ಉಯ್ಯಾಲೋತ್ಸವ ಹಾಗೂ ಬೇವಿನ ಕೆಂಡೋತ್ಸವ ನಡೆಯಿತು.

ಮಂಗಳವಾರ ಬೆಳಿಗ್ಗೆ ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಲಾಯಿತು. ಬುಧವಾರ ನಾಲ್ಕು ದೇವರನ್ನು ಮೆರವಣಿಗೆ ನಡೆಸುವ ಸಂದರ್ಭ ಭಕ್ತರು ಪರಸ್ಪರ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಹೋಳಿ ಆಚರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT