ಮಂಗಳವಾರ, ನವೆಂಬರ್ 24, 2020
26 °C
ಸರ್ಕಾರದ ನಿಯಮ ಪಾಲಿಸಲು ವರ್ತಕರಿಗೆ ಜಿಲ್ಲಾಧಿಕಾರಿ ಸೂಚನೆ

ಪಟಾಕಿ ಮಾರಾಟದಲ್ಲಿ ಮೈ ಮರೆಯದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟಾಕಿ ವರ್ತಕರು ಸರ್ಕಾರದ ನಿರ್ದೇಶನ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಎಚ್ಚರಿಕೆ ನೀಡಿದರು.

ಪಟಾಕಿ ವರ್ತಕರೊಂದಿಗೆ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಾರಾಟ ಮಳಿಗೆಗಳ ಮುಂಭಾಗ ಅಂತರ ಪಾಲನೆ ಮಾಡಬೇಕು. ಕಡಿಮೆ ಅಪಾಯಕಾರಿ ಹಾಗೂ ಹೆಚ್ಚು ಹಾನಿಕಾರಕವಲ್ಲದ ಪಟಾಕಿ ಹೊರತು ಪಡಿಸಿ ಬೇರಾವುದೇ ಸಾಮಗ್ರಿ ಮಾರುವಂತಿಲ್ಲ. ಗ್ರಾಹಕರು ಪರಸ್ಪರ ಅಂತರ ಪಾಲನೆ, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಸಬೇಕು. ನ.16ರವರೆಗೆ ಮಾತ್ರ ಪಟಾಕಿ ಮಾರಾಟ ಮಾಡಬೇಕು. ಪರಿಸರ ಸ್ನೇಹಿತ ಪಟಾಕಿಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.

ಸಾರ್ವಜನಿಕರ ಹಿತದೃಷ್ಠಿಯಿಂದ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಹಸಿರು ಪಟಾಕಿಗಳ ಕರಿತು
ಪರಿಶೀಲಿಸುವಂತೆ ಸೂಚಿಸಿದರಲ್ಲದೆ, ಹಸಿರು ಪಟಾಕಿಗಳ ಮೇಲೆ ಯಾವುದಾದರು ಗುರುತುಗಳಿದ್ದರೆ ಅಂತಹ ಪಟಾಕಿಗಳನ್ನೇ ಖರೀದಿಸಲು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜರಾಂ, ಉಪ ವಿಭಾಗಾಧಿಕಾರಿಗಳಾದ ಗಿರೀಶ್ ನಂದನ್, ಬಿ.ಎ. ಜಗದೀಶ್, ತಹಶೀಲ್ದಾರ್‌ಗಳಾದ ಶಿವಶಂಕರಪ್ಪ, ರೇಣುಕುಮಾರ್, ನಟೇಶ್, ಡಿ.ವೈ.ಎಸ್.ಪಿ. ಪುಟ್ಟಸ್ವಾಮಿ, ಜಿಲ್ಲಾ ಅಗ್ನಿ ಶಾಮಕಾಧಿಕಾರಿ ರಂಗನಾಥ್ ಹಾಗೂ ಪಟಾಕಿ ವರ್ತಕರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.