ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದಲೇ ವೈದ್ಯರ ಸಲಹೆಗೆ ಇ-ಸಂಜೀವಿನಿ ಆ್ಯಪ್

Last Updated 7 ಸೆಪ್ಟೆಂಬರ್ 2020, 12:20 IST
ಅಕ್ಷರ ಗಾತ್ರ

ಹಾಸನ: ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ವೈದ್ಯರಿಂದ ಸಲಹೆ ಪಡೆಯಲು ಸರ್ಕಾರ ‘ಇ-ಸಂಜೀವಿನಿ’ಆ್ಯಪ್ ಸಿದ್ಧಪಡಿಸಿದೆ.

ವೈದ್ಯರನ್ನು ಸಂಪರ್ಕಿಸಲು ಮೊಬೈಲ್‍ನ ಪ್ಲೇ ಸ್ಟೋರ್‌ನಲ್ಲಿ ‘ಇ-ಸಂಜೀವಿನಿ ಒ.ಪಿ.ಡಿ.’ ಎಂಬ ಆ್ಯಪ್ ಡೌನ್‌ಲೋಡ್
ಮಾಡಿಕೊಳ್ಳಬೇಕು ಅಥವಾ ಗೂಗಲ್‍ನಲ್ಲಿ ಇ-ಸಂಜೀವಿನಿ ಒ.ಪಿ.ಡಿ. ಎಂದು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ವೆಬ್ ವಿಡಿಯೊ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರಿಗೆ ಆರೋಗ್ಯ ಸಮಸ್ಯೆ ಕುರಿತು ವಿವರಿಸಿದರೆ ಚಿಕಿತ್ಸೆ ಬರೆದು ಕೊಡಲಿದ್ದಾರೆ.

ಕೋವಿಡೇತರ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯ,
ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್ಟೇಷನ್ ಸರ್ವಿಸ್) ಎಂಬ ಹೆಸರಲ್ಲಿ ಲಿಂಕ್ ಸಿದ್ಧಪಡಿಸಿದೆ.

ಇ-ಸಂಜೀವಿನಿ ಬಳಕೆ ಹೇಗೆ: ಟೆಲಿ ಸಮಾಲೋಚನಾ ಸೇವೆಗಾಗಿ ಮೊಬೈಲ್‍ನ ಪ್ಲೇ ಸ್ಟೋರ್ ಅಥವಾ ಗೂಗಲ್‍ನಲ್ಲಿ ಇ ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ರಿಜಿಸ್ಟ್ರೇಷನ್‍ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಸಂಖ್ಯೆ ಬರಲಿದೆ.

ಈ ಒಟಿಪಿ ನಮೂದಿಸಿದರೆ, ರಿಜಿಸ್ಟ್ರೇಷನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ಟೋಕನ್ ನಂಬರ್ ದೊರೆಯಲಿದೆ. ಟೋಕನ್ ನಂಬರ್ ನೀಡಿ, ವೈದ್ಯರನ್ನು ವಿಡಿಯೊ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆ ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತದೆ.

ಒಮ್ಮೆ ನೋಂದಣಿಯಾದರೆ ಮತ್ತೊಮ್ಮೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇಂತಹ ಜನಸ್ನೇಹಿ ಆ್ಯಪ್ ಸೌಲಭ್ಯ ಪಡೆದು ಎಲ್ಲರೂ ಆರೋಗ್ಯವಾಗಿರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT