ಹಾಸನ: ‘ಕೆಲವೇ ಸೆಕೆಂಡ್ಗಳಲ್ಲಿ ಎಂಟು ಬಗೆಯ ಕ್ಯೂಬ್ಗಳನ್ನು ಜೋಡಿಸಿ, ಏಷ್ಯಾ ಬುಕ್ ಆಫ್ ರೆಕಾರ್ಡ್ ತಮ್ಮದಾಗಿಸಿಕೊಂಡಿದ್ದೇನೆ’ ಎಂದು ಪರಿಣಿತ ಗೌಡ ತಿಳಿಸಿದರು.

‘ಅತೀ ಕಡಿಮೆ 58.8 ಸೆಕೆಂಡ್ನಲ್ಲಿ ಎಂಟು ಬಗೆಯ ಕ್ಯೂಬ್ಗಳನ್ನು ಜೋಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ನಗರದ ಸತ್ಯವಂಗಲ ಪ್ರದೇಶದ ನಿವಾಸಿಯಾಗಿದ್ದು, ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. 9ನೇ ವರ್ಷದಿಂದಲೇ ಯೂಟ್ಯೂಬ್ನಲ್ಲಿ, ಕ್ಯೂಬ್ ಜೋಡಿಸುವ ವಿಡಿಯೊಗಳನ್ನು ವೀಕ್ಷಿಸಿ ಅಭ್ಯಾಸ ಆರಂಭಿಸಿದ್ದು, ನಿರಂತರ ಶ್ರಮ ಮತ್ತು ಆಸಕ್ತಿಯಿಂದ ಈ ಕೌಶಲದಲ್ಲಿ ಪರಿಣತಿ ಸಾಧಿಸಿದ್ದೇನೆ’ ಎಂದು ಹೇಳಿದರು.

‘ಇವರಿಗೆ ತಾಯಿ ರಂಜಿತಾ ಹಾಗೂ ತಂದೆ ಸ್ವಾಮಿ ಗೌಡ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದು, ಬರಿಗಣ್ಣಿನಿಂದ ಮಾತ್ರವಲ್ಲದೇ ಕಣ್ಣು ಕಟ್ಟಿಕೊಂಡು ಕೂಡ ವಿವಿಧ ಬಗೆಯ ಕ್ಯೂಬ್ಗಳನ್ನು ಜೋಡಿಸುವ ಕೌಶಲ ಹೊಂದಿದ್ದೇನೆ’ ಎಂದು ಹೇಳಿದರು.

ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಸ್ನೇಹಿತರು, ಪೋಷಕರು ಹಾಗೂ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಗಿನ್ನೆಸ್ ದಾಖಲೆಯನ್ನೂ ಪಡೆಯುವ ಸಾಧ್ಯತೆ ಇದೆ ಎಂದು ಪರಿಣಿತ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಯಿ ರಂಜಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.