ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ತಾಂತ್ರಿಕ ಮಾಹಿತಿಗೆ ‘ತೋಟಗಾರಿಕೆ ವಾಣಿ’

ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ ಬಿಡುಗಡೆ: ಡಿ.ಸಿ ಗಿರೀಶ್‌
Last Updated 23 ಏಪ್ರಿಲ್ 2021, 14:17 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಕೃಷಿಕರಿಗೆ ತಾಂತ್ರಿಕ ಅರಿವು ಮೂಡಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ವತಿಯಿಂದ‘ತೋಟಗಾರಿಕಾ ವಾಣಿ’ ವಿಶೇಷ ಮಾಸಿಕ ಸಂಚಿಕೆಯನ್ನು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಹೊರ ತರಲಾಗಿದೆ ಎಂದುಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ‘ತೋಟಗಾರಿಕೆ ವಾಣಿ’ ಎಂಬ ವಿಶೇಷ ಸಂಚಿಕೆ ಬಿಡುಗಡೆ ಮಾಡಿಮಾತನಾಡಿದರು.

ಮುಂಗಾರು -ಹಿಂಗಾರು ವೇಳೆ ಜಿಲ್ಲೆಯಲ್ಲಿ ರೈತರಿಂದ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಕಾಳು ಮೆಣಸು, ಶುಂಠಿ , ಬಾಳೆ, ಆಲೂಗೆಡ್ಡೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತಾಂತ್ರಿಕ ನಿರ್ವಹಣೆ ಕೊರತೆ ಹಾಗೂ ಸರ್ಕಾರದಯೋಜನೆಗಳ ಮಾಹಿತಿ ಕೊರತೆ ಇದೆ. ಪ್ರಗತಿಪರ ರೈತರ ಮಾಹಿತಿ ಹಾಗೂ ಅವರು ಅನುಸರಿಸುತ್ತಿರುವ ತೋಟಗಳನಿರ್ವಹಣೆ ಬಗ್ಗೆ ಸಂಚಿಕೆಯಲ್ಲಿ ಮಾಹಿತಿ ಇರಲಿದೆ. ಆದ್ದರಿಂದ ಇದು ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗಲಿದೆ ಎಂದುಮಾಹಿತಿ ನೀಡಿದರು.

ಈ ವಿಶೇಷ ಸಂಚಿಕೆ ತಿಂಗಳಿಗೊಮ್ಮೆ ಹೊರ ಬರುವುದರಿಂದ ಉಚಿತವಾಗಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ,ಗ್ರಾಮ ಪಂಚಾಯತಿ, ರೈತ ಸಂಘ, ಒಕ್ಕೂಟದ ಮೂಲಕ ವಿತರಣೆ ಮಾಡಲಾಗುವುದು. ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ಮಾತನಾಡಿ, ಮುಂಬರುವ ಋತುವಿನಲ್ಲಿ ತೋಟಗಾರಿಕಾ ಬೆಳೆಗಳತಾಂತ್ರಿಕ ನಿರ್ವಹಣೆ ಅದರಲ್ಲಿಯೂ ಮುಖ್ಯವಾಗಿ ಆಲೂಗೆಡ್ಡೆ, ತೆಂಗು, ಅಡಿಕೆ ಇತರೆ ಬೆಳೆಗಳ ಬಗ್ಗೆ ಮಾಹಿತಿ ನೀಡಲುಇಲಾಖೆಯು ವಿಶೇಷ ಸಂಚಿಕೆಯ ಹೊರತಂದಿದೆ ಎಂದರು.

ರೈತರ ಆದಾಯ ದ್ವಿಗುಣ ಮಾಡುವುದು ಹಾಗೂ ಬೆಳೆಗಳಿಗೆ ಅನುಗುಣವಾಗಿ ಮಾಹಿತಿ ನೀಡುವುದು ಇದರಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಪರಮೇಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಪತ್ರಕರ್ತ ಪ್ರಸನ್ನಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT