ಹಳೇಬೀಡು: ಹೊಯ್ಸಳೇಶ್ವರ ದೇವಾಲಯದ ಬಳಿ ರಸ್ತೆಗೆ ಚಾಚಿಕೊಂಡಿದ್ದ ಗೂಡಂಗಡಿ ಹಾಗೂ ತಳ್ಳುಗಾಡಿಗಳನ್ನು ಸೋಮವಾರ ಗ್ರಾಮ ಪಂಚಾಯಿತಿಯಿಂದ ತೆರವುಗೊಳಿಸಲಾಯಿತು.

ದೇವಾಲಯದ ಕಾಂಪೌಂಡ್ ಪಕ್ಕದಲ್ಲಿದ್ದ ಕಬ್ಬಿನ ಸಿಪ್ಪೆ ಹಾಗೂ ಎಳನೀರು ಮಟ್ಟೆಯ ರಾಶಿಯನ್ನು ತೆರವು ಮಾಡಲಾಯಿತು.

ರಸ್ತೆಗೆ ಚಾಚಿಕೊಂಡಿದ್ದ ಗೂಡಂಗಡಿಗಳನ್ನು ಹಿಂದಕ್ಕೆ ಸರಿಸಲು ಗ್ರಾಮ ಪಂಚಾಯಿತಿಯವರು ಮುಂದಾದಾಗ ಮಾಲೀಕರು ಅಡ್ಡ ನಿಂತರು. ಗೂಡಂಗಡಿ ಮಾಲೀಕರಿಗೂ ಗ್ರಾಮ ಪಂಚಾಯಿತಿಯವರಿಗೂ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.

ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕು. ಹಳೇಬೀಡು ಗ್ರಾಮಕ್ಕೆ ದೂರದ ದೇಶದ ಪ್ರವಾಸಿಗರು ಬರುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಊರಿನ ಗೌರವವನ್ನು ಕಾಪಾಡಿಕೊಳ್ಳಬೇಕಾಗಿದೆ. ವಿಶ್ವ ಪಾರಂಪರಿಕ ತಾಣದ ಗೌರವಕ್ಕೆ ಧಕ್ಕೆ ಆಗದಂತೆ ಎಲ್ಲರೂ ನಡೆದುಕೊಳ್ಳಬೇಕು. ಜೀವನೋಪಾಯದ ವೃತ್ತಿಯನ್ನು ಮತ್ತೊಬ್ಬರಿಗೆ ತೊಡಕಾಗದಂತೆ ನಡೆಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು ಎಚ್ಚರಿಕೆ ನೀಡಿದರು.

ನಂತರ 50ಕ್ಕೂ ಹೆಚ್ಚು ಗೂಡಂಗಡಿ ಹಾಗೂ ತಳ್ಳುಗಾಡಿಗಳನ್ನು ಹಿಂದಕ್ಕೆ ಸರಿಸಲಾಯಿತು. ಅಸ್ತವ್ಯಸ್ತವಾಗಿದ್ದ ಗೂಡಂಗಡಿ, ತಳ್ಳುಗಾಡಿಯ ಅವಶೇಷಗಳನ್ನು ಹೊರ ಸಾಗಿಸಲಾಯಿತು.

ಹೋಳು ಮಾಡಿದ ಕಲ್ಲಂಗಡಿ, ಸೌತೆಕಾಯಿ ಮೊದಲಾದ ಹಣ್ಣುಗಳನ್ನು ತೆರೆದ ಸ್ಥಿತಿಯಲ್ಲಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದವರಿಗೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಕೊಂಡು ಮಾರಾಟ ಮಾಡಬೇಕು. ಮಾತು ಕೇಳದಿದ್ದರೆ ವ್ಯಾಪಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಎಚ್ಚರಿಕೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿ.ವಿರೂಪಾಕ್ಷ, ಕಾರ್ಯದರ್ಶಿ ಶೈಲಜಾ, ಸದಸ್ಯರಾದ ಎಚ್.ಎಂ.ನಿಂಗಪ್ಪ, ಮೋಹನ್, ಬಿಲ್ ಕಲೆಕ್ಟರ್ ಬಸವರಾಜು, ಕಂಪ್ಯೂಟರ್ ಆಪರೇಟರ್ ಪ್ರದೀಪ್, ಗ್ರಾಮ ಪಂಚಾಯಿತಿ ನೌಕರರು ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.