ಹಾಸನ: ಹಾಸನ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರು ಮತ್ತು ಮಹಿಳೆಯರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಪುರುಷರ ತಂಡ ಸತತ ಎರಡನೇ ಬಾರಿ ತಂಡ ಪ್ರಶಸ್ತಿ ಗಳಿಸಿದೆ. ಮಹಿಳೆಯರ ವಿಭಾಗದ ತಂಡ ದ್ವಿತೀಯ ಬಹುಮಾನ ಪಡೆದಿದೆ.

ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕಾಲೇಜಿನ ಕ್ರೀಡಾಪಟು ಬಿ.ಕೆ. ಲಕ್ಷ್ಮಣ್, ಹರಿಯಾಣದಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.

ಪುರುಷರ ವಿಭಾಗದ ತಂಡವನ್ನು ಕಾಲೇಜಿನ ಕ್ರೀಡಾಪಟುಗಳಾದ ಬಿ.ಕೆ. ಲಕ್ಷ್ಮಣ್, ಬಿ.ಜಿ. ಹೇಮಂತ್ಕುಮಾರ್, ಕೆ.ಎಸ್. ಶ್ರೀಜನ್, ಟಿ.ಎಸ್. ಜೀವನ್ಕುಮಾರ್, ಎ.ಆರ್. ಪ್ರಶಾಂತ್, ಕೆ.ಎನ್. ರಕ್ಷಿತ್ಗೌಡ ಪ್ರತಿನಿಧಿಸಿದ್ದರು. ಮಹಿಳೆಯರ ತಂಡವನ್ನು ಜೆ.ಜೆ. ಬಿಂದುಶ್ರೀ, ಜಿ.ಎಚ್. ಭಾವನಾ, ಸಿ.ಎಲ್. ತೇಜಸ್ವಿನಿ, ಕೆ.ವೈ. ಮಾನಸಾ, ಸಿ.ಡಿ. ಸಿಂಚನಾ, ಎಂ.ಎಲ್. ಮಮತಾ ಪ್ರತಿನಿಧಿಸಿದ್ದರು.

ಕ್ರೀಡಾಪಟುಗಳನ್ನು ಪ್ರಾಂಶುಪಾಲ ಡಾ.ಎಂ.ಬಿ. ಇರ್ಷಾದ್, ಡೀನ್ ಡಿ.ಎಸ್. ರಾಜು, ಪರೀಕ್ಷಾ ನಿಯಂತ್ರಕ ಕೆ.ಡಿ. ಮುರಳೀಧರ, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಐಕ್ಯುಎಸಿ ಸಂಚಾಲಕ ಮಂಜುನಾಥ್, ದೈಹಿಕಶಿಕ್ಷಣ ನಿರ್ದೇಶಕ ಜೆ.ಕೆ. ಪವನ್ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.