ಹಾಸನ: ‘ನಗರದ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಪತ್ನಿ ಶ್ರುತಿ ಸಾವನ್ನಪ್ಪಿದ್ದಾರೆ. ಜನಿಸಿದ ನನ್ನ ಮಗುವನ್ನು ನಾನು ಸಾಕುವುದು ಕಷ್ಟವಾಗಿದೆ. ವೈದ್ಯರೇ ಮುಂದಿನ ಆರು ತಿಂಗಳ ಕಾಲ ನನ್ನ ಮಗುವನ್ನು ಸಂರಕ್ಷಿಸಿ, ನಂತರ ನನಗೆ ಒಪ್ಪಿಸಬೇಕು’ ಎಂದು ಮೃತರ ಪತಿ ಪುನೀತ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಪತ್ನಿ ಒಳಗೆ ಹೋಗುವಾಗ ಚೆನ್ನಾಗಿಯೇ ಇದ್ದಳು. ಆಕೆಗೆ ಯಾರೂ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಹೊಟ್ಟೆನೋವು ಎಂದು ಹೇಳಿದಾಗ ವೈದ್ಯರು ನಿರ್ಲಕ್ಷ್ಯದಿಂದ ವರ್ತಿಸಿದರು. ಲಘುವಾಗಿ ಮಾತನಾಡಿದರು’ ಎಂದು ದೂರಿದರು.

‘ಆಸ್ಪತ್ರೆಗೆ ದಾಖಲಾದ ನಂತರ ಇದೇ ದಿನ ಹೆರಿಗೆ ಎಂದು ತಿಳಿಸಲಿಲ್ಲ. ನೋವು ತಾಳಿಕೊಳ್ಳಿ ಎಂದಷ್ಟೇ ಹೇಳಿದರು. ಭಾನುವಾರ ರಜೆ ಇದ್ದುದರಿಂದ ಹಿರಿಯ ವೈದ್ಯರು ಕರ್ತವ್ಯದಲ್ಲಿ ಇರಲಿಲ್ಲ. ಅನುಭವ ಕಡಿಮೆ ಇರುವ ಯುವ ವೈದ್ಯರ ಬಳಿ ಚಿಕಿತ್ಸೆ ಮಾಡಿಸಿದರು’ ಎಂದು ಆರೋಪಿಸಿದರು.

‘ಆಸ್ಪತ್ರೆ ಹೊರಗಿನಿಂದ ನೋಡಲು ಚೆನ್ನಾಗಿದೆ. ಆದರೆ ಒಳಗೆ ಯಾವುದೇ ಸೌಲಭ್ಯಗಳಿಲ್ಲ. ಯಾವುದೇ ಹಿರಿಯ ವೈದ್ಯರು ನನ್ನ ಪತ್ನಿಯನ್ನು ಸರಿಯಾಗಿ ನೋಡಲಿಲ್ಲ. ಹೆರಿಗೆ ಆದ ನಂತರವೂ ಶ್ರುತಿ ಚೆನ್ನಾಗಿದ್ದರು ಎಂದು ಹೇಳುತ್ತಾರೆ. ಮಧ್ಯೆ ಏನಾಯಿತು ಎಂಬುದು ಗೊತ್ತಿಲ್ಲ. ನಾವು ಒಳಗೆ ಹೋಗಲು ಸುರಕ್ಷತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ನನಗೆ ಯಾವುದೇ ಪರಿಹಾರ ಬೇಡ, ನನಗೆ ನ್ಯಾಯ ಬೇಕು. ಈ ಆಸ್ಪತ್ರೆಗೆ ಹೆಚ್ಚು ಬಡವರು ಬರುತ್ತಾರೆ. ಮುಂದೆ ಯಾರಿಗೂ ಹೀಗೆ ಆಗಬಾರದು’ ಎಂದು ಹೇಳಿದರು.

‘ನಾವು ಸಾವಿರಾರು ಜೀವ ಉಳಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ನನ್ನ ಪತ್ನಿ ಏಕೆ ಸಾವನ್ನಪ್ಪಿದರು’ ಎಂದು ಪ್ರಶ್ನಿಸಿದ ಅವರು, ‘ಈಗ ನನ್ನ ಮಗುವನ್ನು ನೋಡಲು ಐಸಿಯುಗೆ ಬಿಡುತ್ತಿಲ್ಲ. ನನಗೆ ನನ್ನ ಮಗು ಬೇಕು. ಮುಂದಿನ ಆರು ತಿಂಗಳ ಕಾಲ ಅವರು ಮಗುವನ್ನು ನೋಡಿಕೊಳ್ಳಲಿ. ವೈದ್ಯರು ಮಾಡಿದ ತಪ್ಪಿಗೆ ಮಗುವನ್ನು ಸುರಕ್ಷಿತವಾಗಿ ಬೆಳೆಸಿ ನಂತರ ಒಪ್ಪಿಸಬೇಕು’ ಎಂದು ಮನವಿ ಮಾಡಿದರು.

‘ಗರ್ಭಿಣಿಯಾಗಿದ್ದರೂ ಶ್ರುತಿ ಸಂಪೂರ್ಣ ಕ್ರಿಯಾಶೀಲವಾಗಿದ್ದರು. ರಕ್ತ ಹಾಕಿದ ನಂತರವೇ ಸಮಸ್ಯೆ ಉಂಟಾಯಿತು. ಸರ್ಕಾರಿ ವೈದ್ಯರು, ಖಾಸಗಿಯಾಗಿ ಉತ್ತಮ ಸೇವೆ ನೀಡುತ್ತಾರೆ. ಇಲ್ಲಿ ಏಕೆ ನೀಡಲಿಲ್ಲ. ನನಗೆ ಆಗಿರುವ ನೋವು ಮತ್ತಾರಿಗೂ ಆಗಬಾರದು. ಸಂಬಂಧಪಟ್ಟವರ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ವಿನಂತಿಸಿದರು.

ಮೃತರ ಸಂಬಂಧಿಕರಾದ ಯತೀಶ್, ಲಾವಣ್ಯ, ಶಿವಣ್ಣ, ತೀರ್ಥ ಪ್ರಸಾದ್, ಜ್ಯೋತಿ ಹಾಗೂ ಯಶು ದೊಡ್ಡಪುರ ಉಪಸ್ಥಿತರಿದ್ದರು.

ವರದಿ ಸಲ್ಲಿಸಲು ಸಂಸದ ಶ್ರೇಯಸ್ ಸೂಚನೆ

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಸದ ಶ್ರೇಯಸ್ ಪಟೇಲ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶುವಿನ ಆರೋಗ್ಯ ವಿಚಾರಿಸಿದರು. ನಂತರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಭೆ ನಡೆಸಿ ವಿವರ ಪಡೆದರು. ಆಸ್ಪತ್ರೆಯಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ವೈದ್ಯರ ನಿರ್ಲಕ್ಷ್ಯ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ತಪ್ಪಿದ್ದರೆ ಯಾವುದೇ ಹಂತದಲ್ಲಿಯೂ ಸಹಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಆಸ್ಪತ್ರೆಯ ಗ್ರೂಪ್-ಡಿ ನೌಕರರು ಹಾಗೂ ಕೆಲವು ಸಿಬ್ಬಂದಿಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೇಯಸ್ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರೊಂದಿಗೆ ಬರುವವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ದರ್ಪದಿಂದ ಮಾತನಾಡುವವರನ್ನು ಕೂಡಲೇ ಅಮಾನತು ಮಾಡಿ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಮಾನವೀಯತೆ ಮುಖ್ಯ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಆಸ್ಪತ್ರೆಯ ವೈದ್ಯರು ಸಭೆಯಲ್ಲಿ ಹಾಜರಿದ್ದರು.

ಬಾಣಂತಿ ಸಾವು: ಕೃಷ್ಣ ಬೈರೇಗೌಡ ಕಿಡಿ

ಇತ್ತೀಚೆಗೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಬಳಿಕ ಮಹಿಳೆ ಸಾವನ್ನಪ್ಪಿದ ಪ್ರಕರಣ ಕುರಿತು ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಾಯಿತು. ಮಹಿಳೆ ನಾಲ್ಕನೇ ಹೆರಿಗೆಗಾಗಿ ಫೆ. 22ರಂದು ದಾಖಲಾಗಿದ್ದು ಸಾಮಾನ್ಯ ಹೆರಿಗೆ ಬಳಿಕ ಪಲ್ಸ್ ರೇಟ್ ಹಾಗೂ ರಕ್ತದೊತ್ತಡ ಕಡಿಮೆಯಾಗಿ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಡಿಸ್ಚಾರ್ಜ್ ಮಾಡಿಕೊಂಡಿದ್ದು ರಸ್ತೆ ಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್ ವಿವರಿಸಿದರು. ಮಹಿಳೆಗೆ ಸ್ಥಿತಿ ವಿಷಮಿಸಿದ ಸಂದರ್ಭದಲ್ಲಿ ನಾನೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇದು ಹಠಾತ್ ಉಂಟಾಗುವ ಏರುಪೇರು ಎಂದು ವೈದ್ಯೆ ಡಾ.ಗಿರಿಜಾ ಹೇಳಿದರು. ಮರಣೋತ್ತರ ಪರೀಕ್ಷೆ ಮಾಡಿಸದಿರುವ ಬಗ್ಗೆ ಮಾಹಿತಿ ನೀಡಿದ ವೈದ್ಯರಿಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಸಾಮಾನ್ಯ ಹೆರಿಗೆ ಬಳಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದರೆ ಕುಟುಂಬದವರಿಗೆ ಸ್ಪಷ್ಟ ಮಾಹಿತಿ ನೀಡಬೇಕಿತ್ತು. ಖಾಸಗಿ ಆಸ್ಪತ್ರೆಗೆ ಕಳುಹಿಸುವ ಅವಶ್ಯಕತೆ ಏನಿತ್ತು? ಈ ನಿರ್ಲಕ್ಷ್ಯದಿಂದಲೇ ಮಹಿಳೆಯ ಸಾವು ಸಂಭವಿಸಿದೆ. ಯಾವುದೇ ರೋಗಿಯನ್ನು ಆಸ್ಪತ್ರೆಯಿಂದ ಕಳುಹಿಸುವಾಗ ಸಂಪೂರ್ಣ ಮಾಹಿತಿ ನೀಡುವುದು ಕಡ್ಡಾಯ. ಏಕೆ ಹೀಗೆ ಮಾಡಿದಿರಿ ಎಂದು ವೈದ್ಯರನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.